ಕಿರಿಕ್ ಪಾರ್ಟಿಯ ರಶ್ಮಿಕಾ, ಕರುನಾಡ ಕ್ರಶ್ ಎಂದರೆ ಅತಿಶಯೋಕ್ತಿಯೇನಲ್ಲ. ಕರುನಾಡ ಕ್ರಶ್, ಸಿಂಪಲ್ಲಾಗಿ ರಕ್ಷಿತ್ ಶೆಟ್ಟಿಗೆ ಬೌಲ್ಡ್ ಆದರೂ, ರಶ್ಮಿಕಾಗೆ ಬೌಲ್ಡ್ ಆಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಶ್ಮಿಕಾ ಎಂಬ ಈ ಚೆಲುವೆಗೆ ಈಗ ಬೌಲ್ಡ್ ಆಗಿರುವುದು ಮೆಗಾಸ್ಟಾರ್ ಚಿರಂಜೀವಿ.
ತೆಲುಗಿನಲ್ಲಿ ಚಲೋ ಚಿತ್ರದಲ್ಲಿ ನಟಿಸಿರುವ ರಶ್ಮಿಕಾ, ಆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದವರು ಮೆಗಾಸ್ಟಾರ್ ಚಿರಂಜೀವಿ. ಅವರು ರಶ್ಮಿಕಾ ಬಗ್ಗೆ ಹೇಳಿದ್ದು ಇಷ್ಟು.
``ರಶ್ಮಿಕಾ ಮಂದಣ್ಣ ಅವರಿಂದ ಈ ಚಿತ್ರಕ್ಕೆ ಗ್ಲಾಮರ್ ಹೆಚ್ಚಾಗಿದೆ. ಅವರು ತುಂಬಾ ಮುದ್ದಾಗಿದ್ದಾರೆ. ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಅವರಿಗೆ ಸ್ವಾಗತ. ಅಲ್ ದಿ ಬೆಸ್ಟ್''
ರಶ್ಮಿಕಾ ಥ್ರಿಲ್ಲಾಗೋದ್ರಲ್ಲಿ ಸಂದೇಹವೇನಿಲ್ಲ. ಮೆಗಾಸ್ಟಾರ್ ಹೊಗಳುವುದು ಎಂದರೆ ಸುಮ್ಮನೆ ಮಾತಲ್ಲ.