` ಸವಿಸವಿ ನೆನಪು.. ಸಾವಿರ ನೆನಪು.. - ಕಿಚ್ಚ @ 22 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
22 years of sudeep
Sudeep In Bramha Movie

ಸರಿಯಾಗಿ ಇವತ್ತಿಗೆ 22 ವರ್ಷಗಳ ಹಿಂದೆ, ಕನ್ನಡ ಚಿತ್ರರಂಗಕ್ಕೆ ಒಬ್ಬ ಸ್ಟಾರ್ ಕಾಲಿಟ್ಟಿದ್ದ. ಅವತ್ತು ಆತ ಅಂಬೆಗಾಲಿಡುತ್ತಿದ್ದ ಮಗು. ಇಂದು ಸ್ಟಾರ್. ಕನ್ನಡ ಚಿತ್ರರಂಗಕ್ಕೆ ಪ್ರತಿ ವರ್ಷ ಹಲವಾರು ಹೊಸ ಪ್ರತಿಭೆಗಳು ಬರುತ್ತವೆ. ಆದರೆ, ನಿಲ್ಲುವ ಗಟ್ಟಿಕಾಳು ಕೆಲವೇ ಕೆಲವು. ಅಂತಹವರಲ್ಲಿ ಸುದೀಪ್ ವಿಶೇಷವಾಗಿ ನಿಂತುಬಿಡ್ತಾರೆ. ಈ 22 ವರ್ಷಗಳಲ್ಲಿ ಅವರು ಚಿತ್ರರಂಗದ ಪ್ರತಿ ಕ್ಷೇತ್ರದಲ್ಲೂ ಹೆಜ್ಜೆಯಿಟ್ಟಿದ್ದಾರೆ. ಗೆದ್ದಿದ್ದಾರೆ. ಸೋತಿದ್ದಾರೆ. ಸೋತಿದ್ದ ಸ್ಥಳದಲ್ಲೇ ಮತ್ತೆ ಗೆದ್ದಿದ್ದಾರೆ. ಕನ್ನಡದಲ್ಲಷ್ಟೇ ಅಲ್ಲ, ಸುದೀಪ್, ತೆಲುಗು, ತಮಿಳು, ಹಿಂದಿಗೂ ಕಾಲಿಟ್ಟು ಗೆದ್ದ ಆರಡಿ ಕಟೌಟು. ಹಾಲಿವುಡ್‍ಗೂ ಪಾದಾರ್ಪಣೆ ಮಾಡ್ತಿರೋ ಸುದೀಪ್, ಚಿತ್ರರಂಗಕ್ಕೆ ಬಂದು 22 ವರ್ಷವಾಗಿ ಹೋಯ್ತಾ..? ತಮ್ಮ ಆರಂಭದ ದಿನದ ಕ್ಷಣಗಳನ್ನು ಸ್ವತಃ ಸುದೀಪ್ ಹೇಳಿಕೊಂಡಿದ್ದಾರೆ. ಇದು ಅವರದ್ದೇ ಪತ್ರ. 

sudeep_kmv.jpg1996, ಜನವರಿ 31

ಬ್ರಹ್ಮ ಚಿತ್ರದ ಮೊದಲ ದಿನದ ಚಿತ್ರೀಕರಣ ಶುರುವಾಯ್ತು. ಅದು ನಾನು ನನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಮೇಕಪ್ ಹಚ್ಚಿಕೊಂಡ ದಿನ. ಈ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟ ದಿನ ಅದು.

ನನಗೆ ಆ್ಯಕ್ಷನ್, ಕಟ್ ಎಂಬ ಪದಗಳು ಹೊಸದಲ್ಲ. ತಂದೆಯ ಜೊತೆ, ಸ್ನೇಹಿತರ ಜೊತೆ ಹಲವು ಬಾರಿ ಚಿತ್ರೀಕರಣದ ಸ್ಥಳಗಳಿಗೆ ಹೋಗುತ್ತಿದ್ದೆ. ಕೇಳುತ್ತಿದ್ದೆ. ಆದರೆ, ಆ ಆ್ಯಕ್ಷನ್ ಕಟ್‍ನಲ್ಲಿ ಸ್ವತಃ ಭಾಗವಾಗದ ಆ ಕ್ಷಣ ಇದೆಯಲ್ಲ.. ಅದನ್ನು ಪದಗಳಲ್ಲಿ ಹೇಳುವುದು ಕಷ್ಟ.

ಆ ದಿನ ನಾನು ಎದುರಿಸಿದ್ದು ಅತ್ಯಂತ ಸರಳ ಸನ್ನಿವೇಶ. ಆ ಚಿತ್ರದಲ್ಲಿ ಅಂಬರೀಷ್ ಮಾಮ ನನ್ನ ಅಣ್ಣನ ಪಾತ್ರ ಮಾಡಿದ್ದರು. ನಾನು ಅವರಿಂದ ಆಶೀರ್ವಾದ ಪಡೆಯಬೇಕಿತ್ತು. ಆದರೆ, ನನಗೆ ಆಗ ಅದು ಸರಳ ದೃಶ್ಯವಾಗಿರಲಿಲ್ಲ. ತುಂಬಾ ಟೇಕ್ ತೆಗೆದುಕೊಂಡೆ. ಅದನ್ನು ನೋಡಿದವರಿಗೆ ನನ್ನ ಸಾಮಥ್ರ್ಯ, ಪ್ರತಿಭೆ ಬಗ್ಗೆ ಅನುಮಾನ ಬಂದಿದ್ದರೂ ಬಂದಿರಬಹುದು. ಅಂದಿನಿಂದ ಶುರುವಾದ ಪಯಣ... ನಿಧಾನಕ್ಕೆ ಸರಿಯಾಗುತ್ತಾ ಹೋಯ್ತು.

22 ವರ್ಷ ಕಳೆದಾಯ್ತು. ಸಿನಿಮಾಗೆ ಹೇಗೆ ಧನ್ಯವಾದ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನನ್ನ ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು, ಸಹ ನಟ-ನಟಿಯರು, ವಿತರಕರು, ಪ್ರದರ್ಶಕರು, ಮಾಧ್ಯಮ.. ಎಲ್ಲಕ್ಕಿಂತ ಮಿಗಿಲಾಗಿ ನೀವು.. ನನ್ನ ಈ ಪಯಣದಲ್ಲಿ ಯಾವುದೇ ಷರತ್ತುಗಳಿಲ್ಲದೆ ಪ್ರೀತಿಸಿದ್ದೀರಿ. ಅಭಿಮಾನದಿಂದ ಅಪ್ಪಿಕೊಂಡಿದ್ದೀರಿ. ನನ್ನನ್ನು ಹಾಗೆ ಅಪ್ಪಿಕೊಂಡು ಒಪ್ಪಿಸಿಕೊಂಡ ನಿಮಗೆ ನಾನು ಚಿರಋಣಿ.

ಸಿನಮಾ, ನನಗೆ ನನ್ನ ಜೀವನದ ಅತ್ಯಂತ ಸುಂದರ ಸಂಗತಿ. ಇವತ್ತು ನಾನು ಏನೇ ಆಗಿರಬಹುದು. ಅದು ನೀವು ನನಗೆ ಕೊಟ್ಟ ಉಡುಗೊರೆ. ಧನ್ಯವಾದಗಳು.

ನನ್ನ ಕುಟುಂಬದವರಿಗೆ ನಾನು ಕೃತಜ್ಞತೆ ಸಲ್ಲಿಸಲೇಬೇಕು. ಅವರು ನನಗಾಗಿ ಮಾಡಿದ ತ್ಯಾಗವನ್ನು ನಾನು ಮರಳಿ ಕೊಡಲು ಸಾಧ್ಯವೇ..? 

ನನ್ನ ಜೊತೆ ನಿಂತಿದ್ದಕ್ಕೆ ನನ್ನ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಲೇಬೇಕು. 

ನನ್ನ ಜೀವನದ ಪ್ರತಿ ಕ್ಷಣಗಳಲ್ಲೂ ನನಗೆ ಜೊತೆಯಾದ ಚಿತ್ರರಂಗಕ್ಕೆ ನಾನು ಯಾವತ್ತೂ ಅಭಾರಿ. ಚಿತ್ರರಂಗದ ಸೇವೆಗೆ ನಾನು ಸದಾಸಿದ್ಧ.

ಪ್ರೀತಿಯಿರಲಿ

ಕಿಚ್ಚ ಸುದೀಪ

ಇಂಥಾದ್ದೊಂದು ಹೃದಯಸ್ಪರ್ಶಿ ಪತ್ರ ಬರೆದಿರುವ ಸುದೀಪ್, ತಮ್ಮ 22 ವರ್ಷಗಳ ವೃತ್ತಿ ಜೀವನದ ಆರಂಭದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery