ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿರುವ ಕನಕನನ್ನು ಈಗ ಸ್ವತಃ ಡಾ.ರಾಜ್ ಕುಟುಂಬ ದರ್ಶನ ಮಾಡಿದೆ. ಕನಕ ಚಿತ್ರದ ಥೀಮ್ ಅಣ್ಣಾವ್ರ ಅಭಿಮಾನಿಯಾಗಿ ನಟಿಸಿರುವ ದುನಿಯಾ ವಿಜಿ. ಅಣ್ಣಾವ್ರ ಸಂದೇಶಗಳನ್ನೇ ಇಟ್ಟುಕೊಂಡು ಹೆಣೆದಿರುವ ಕಥೆಯಲ್ಲಿ ರಾಜ್ ಕೂಡಾ ಒಂದು ಪಾತ್ರವಾಗಿರುವುದು ವಿಶೇಷ. ಚಿತ್ರದ ಕ್ಲೈಮಾಕ್ಸ್‍ನಲ್ಲಿ ನಾಯಕನಿಗೆ ಸಹಾಯ ಮಾಡುವುದು ರಾಜ್‍ಕುಮಾರ್. ಹೇಗೆ ಅನ್ನೋ ಕುತೂಹಲಕ್ಕೆ ಚಿತ್ರಮಂದಿರಗಳಲ್ಲಿ ಉತ್ತರ ಇದೆ.
ಈಗ ಚಿತ್ರವನ್ನು ಪುನೀತ್ ರಾಜ್‍ಕುಮಾರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ನೋಡಲು ನಿರ್ಧರಿಸಿದ್ದಾರೆ. ಇವರಿಗಾಗಿಯೇ ನಿರ್ಮಾಪಕ, ನಿರ್ದೇಶಕ ಆರ್.ಚಂದ್ರು ವಿಶೇಷ ಪ್ರದರ್ಶನ ಏರ್ಪಡಿಸಿರುವುದು ವಿಶೇಷ.