` ಅವಳೇ ಮಂಜರಿ.. ಅವಳೇ ಕಾವ್ಯ.. ಅವಳೇ ರೂಪಿಕಾ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
manjari movie image
Roopika In Manjari

ರೂಪಿಕಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಂಜರಿ ಈ ವಾರ ತೆರೆಗೆ ಬರುತ್ತಿದೆ. ಇದೊಂದು ಪಕ್ಕಾ ಹಾರರ್ ಸಿನಿಮಾ. ರೂಪಿಕಾ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾದಲ್ಲಿ ನಟಿಸುತ್ತಿರುವುದು ಚಿತ್ರದ ಹೈಲೈಟ್.

ಒಂದೂವರೆ ವರ್ಷ ಗ್ಯಾಪ್ ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ.ತುಂಬಾ ಡಿಫರೆಂಟ್ ಆದ, ನನಗೆ ನಟನೆಗೆ ಹೆಚ್ಚು ಸ್ಕೋಪ್ ಇದ್ದ ಪಾತ್ರ ಇದು ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ರೂಪಿಕಾ.

ಚಿತ್ರದ ಟೈಟಲ್ ಮಂಜರಿ ಪಾತ್ರಧಾರಿ ಅವರೇ. ಚಿತ್ರದಲ್ಲಿ ಕಾವ್ಯ ಪಾತ್ರಧಾರಿಯೂ ಅವರೇ. ಒಂದರ್ಥದಲ್ಲಿ ಡಬಲ್ ಆ್ಯಕ್ಟಿಂಗ್. ಹೇಗೆ ಅನ್ನೋ ಸಸ್ಪೆನ್ಸ್‍ಗೆ ಉತ್ತರ ಸಿಗೋದು ಚಿತ್ರಮಂದಿರಗಳಲ್ಲಿ ಮಾತ್ರ.

ಕೆಲವು ರಿಸ್ಕೀ ಸ್ಟಂಟ್‍ಗಳನ್ನು ಯಾವುದೇ ಡ್ಯೂಪ್‍ಗಳ ಸಹಾಯವಿಲ್ಲದೆ ಮಾಡಿದ್ದೇನೆ. ಅದು ನನಗೆ ಥ್ರಿಲ್ಲಿಂಗ್ ಆಗಿತ್ತು ಎಂದು ಚಿತ್ರತಂಡದ ಜೊತೆಗಿನ ಅನುಭವ ನೆನಪಿಸಿಕೊಳ್ಳುವ ರೂಪಿಕಾ, ಚಿತ್ರದ ಮೇಲೆ ಅಪಾರ ಭರವಸೆ ಇಟ್ಟುಕೊಂಡು ಕಾಯುತ್ತಿದ್ದಾರೆ.

Padarasa Movie Gallery

Kumari 21 Movie Gallery