` ಚಂದನ್ ಶೆಟ್ಟಿ ಲೈಫ್‍ನಲ್ಲಿ ಅಪ್ಪನೇ ಎಲ್ಲ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
chandan shetty's immense love for his dad
Chandan Shetty Family Image

ಬಿಗ್‍ಬಾಸ್ ಸೀಸನ್ 5 ವಿನ್ನರ್ ಚಂದನ್ ಶೆಟ್ಟಿ ಕೈಗೆ ಏನೇ ಸಿಕ್ಕರೂ ಅದರಲ್ಲೇ ಮ್ಯೂಸಿಕ್ ಟ್ಯೂನ್ ಹಾಕೋದ್ರಲ್ಲಿ ಎತ್ತಿದ ಕೈ. ಟೇಬಲ್, ಸ್ಪೂನು, ತಟ್ಟೆ, ಲೋಟ, ಡಬ್ಬ.. ಯಾವುದರಲ್ಲೇ ಆಗಲೀ.. ಸಂಗೀತ ಹೊರಹೊಮ್ಮಿಸೋ ಪ್ರತಿಭಾವಂತ. ಅದನ್ನು ಬಿಗ್‍ಬಾಸ್‍ನ ಹಲವು ಎಪಿಸೋಡ್‍ಗಳಲ್ಲಿ ಕಣ್ಣಾರೆ ಕಂಡಿದ್ದಾರೆ ಕರ್ನಾಟಕದ ಜನ.

ಇಷ್ಟಕ್ಕೂ ಅಂಥಾ ಕೌಶಲ್ಯ ಒಲಿದದ್ದು ಹೇಗೆ ಅಂದ್ರೆ, ಚಂದನ್ ಶೆಟ್ಟಿ ಹೇಳಿಕೊಳ್ಳೋದು ಅಪ್ಪನ ಕಥೆಯನ್ನ. ಅವರ ತಂದೆಯದ್ದೊಂದು ಸ್ಟೇಷನರಿ ಅಂಗಡಿಯಿತ್ತು. ಅಲ್ಲಿ ಬಿಡುವಿನಲ್ಲಿದ್ದಾಗ ಅವರ ತಂದೆ ಚಂದನ್ ಶೆಟ್ಟಿಯ ತಂದೆ ಹಾಡುತ್ತಿದ್ದರಂತೆ. ಆಗ ಇವರಿಗೆ ಡಬ್ಬ ತಂದು ಬಾರಿಸಲು ಹೇಳುತ್ತಿದ್ದರಂತೆ. ಅದು ಪ್ರಾಕ್ಟೀಸ್ ಆಗಿ, ಅದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ.

ಮಾಡ್ತಾ ಮಾಡ್ತಾ ಯೋಗ.. ಹಾಡ್ತಾ ಹಾಡ್ತಾ ರಾಗ ಅನ್ನೋದು ಇದಕ್ಕೇ ಇರಬೇಕು. ಅಂದಹಾಗೆ ಚಂದನ್ ಶೆಟ್ಟಿ, ತಾವು ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನೆಲ್ಲ ತಂದೆಗೆ ಕೊಡಲು ನಿರ್ಧರಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ವಂತ ಮನೆ ಕಳೆದುಕೊಂಡಿರುವ ಅಪ್ಪನಿಗೆ, ಒಂದು ಮನೆ ಕಟ್ಟಿಸಿಕೊಡಬೇಕು ಅನ್ನೋದು ಚಂದನ್ ಶೆಟ್ಟಿಯ ಕನಸಾಗಿತ್ತು. ಅಪ್ಪನಿಗೆ ಬಿಗ್‍ಬಾಸ್‍ನಲ್ಲಿ ಗೆದ್ದ ಅಷ್ಟೂ ಹಣವನ್ನು ಕೊಟ್ಟಿದ್ದಾರಂತೆ ಚಂದನ್ ಶೆಟ್ಟಿ.

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery