ಗೋಲ್ಡನ್ ಸ್ಟಾರ್ ಗಣೇಶ್, ರಶ್ಮಿಕಾ ಮಂದಣ್ಣ ಅಭಿನಯದ, ಸಿಂಪಲ್ ಸುನಿ ನಿರ್ದೇಶನದ ಚಮಕ್, ಬಾಕ್ಸಾಫೀಸ್‍ನಲ್ಲೂ ಚಮಕ್ ಮಾಡ್ತಿರೋದು ಗೊತ್ತಿರೋ ವಿಷಯಾನೇ. ತೆಲುಗಿನಲ್ಲೂ ಚಮಕ್ ಮಾಡೋ ಇಂಗಿತ ವ್ಯಕ್ತಪಡಿಸಿದ್ದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಈಗ ತೆಲುಗು ಚಮಕ್‍ನ ಒಂದೊಂದೇ ವಿಷಯವನ್ನು ಹೊರಹಾಕತೊಡಗಿದ್ದಾರೆ.
ತೆಲುಗಿನಲ್ಲಿ ಮಾಡಲಿರುವ ಚಮಕ್‍ಗೆ ಹೀರೋ ಆಗಿ ನಾನಿ ಆಯ್ಕೆ ಫೈನಲ್ ಹಂತದಲ್ಲಿದೆಯಂತೆ. ಇನ್ನು ರಶ್ಮಿಕಾ ಮಂದಣ್ಣ ಅವರ ಪಾತ್ರವನ್ನು ತೆಲುಗಿನಲ್ಲಿ ರಚಿತಾ ರಾಮ್ ಮಾಡುವ ಸಾಧ್ಯತೆಗಳಿವೆ. ಅಂದಹಾಗೆ ತೆಲುಗಿನಲ್ಲೂ ಕೂಡಾ ಚಂದ್ರಶೇಖರ್ ಅವರೇ ನಿರ್ಮಾಪಕರು.
ರಚಿತಾ ರಾಮ್, ನಾಯಕಿಯಾಗಿ ನಟಿಸುತ್ತಿರುವ ಅಯೋಗ್ಯ ಚಿತ್ರಕ್ಕೆ ಇದೇ ಚಂದ್ರಶೇಖರ್ ನಿರ್ಮಾಪಕ. ಈ ಜೋಡಿ ತೆಲುಗು ಚಮಕ್‍ನಲ್ಲೂ ಕಂಟಿನ್ಯೂ ಆಗುತ್ತಿದೆ. ಆದರೆ, ಸದ್ಯಕ್ಕೆ ಯಾವುದೂ ಫೈನಲ್ ಅಲ್ಲ. ಅಧಿಕೃತ ಅಲ್ಲ.