ನಾದಬ್ರಹ್ಮ ಹಂಸಲೇಖ, ನಿರ್ದೇಶಕರಾಗುತ್ತಿರುವ ಸಂಗತಿ ಹೊಸದೇನೂ ಅಲ್ಲ. `ಶಕುಂತ್ಲೆ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಹಂಸಲೇಖ, ಚಿತ್ರದ ಒಂದು ಸಣ್ಣ ಟೀಸರ್ ಬಿಟ್ಟಿದ್ದಾರೆ. ಅದು ಟೀಸರ್ ಅಲ್ಲ, ಪಂಥಾಹ್ವಾನ ಎಂದರೂ ಆಶ್ಚರ್ಯವಿಲ್ಲ. ಏಕೆಂದರೆ, ಟೀಸರ್‍ನಲ್ಲಿರೋದು ಒಗಟು.
ಇದು ಹಂಸಲೇಖ ಒಗಟು - ಅಂಚಿಲ್ದ್ ಅರಿವೆ ಉಟ್ಕಂಡ್, ತಳಾ ಇಲ್ದ ತಂಬ್ಗೆ ತಗಂಡ್, ಏರಿ ಇಲ್ದಿರೋ ಕೆರೆಗೆ, ತೂಬೆ ಇಲ್ದಿರೋ ತುದಿಗೇ, ನೀರ್ ತರಕ್ ಹೋದ ನಾರಿ...
ಉತ್ತರ ಹೇಳಿದೋವ್ರಿಗೆ ಒಂದು ಲಕ್ಷ ಬಹುಮಾನ ಕೊಡ್ತಾರಂತೆ. ಒಗಟುಗಳನ್ನು ಈಗಾಗಲೇ ಹಲವು ಸಿನಿಮಾಗಳಲ್ಲಿ ಹಾಡಾಗಿಸಿದ್ದ ಹಂಸಲೇಖ, ಈ ಒಗಟಿನ ಮೂಲಕ ಕನ್ನಡಿಗರ ತಲೆಗೊಂದು ಹೊಸ ಒಗಟು ಬಿಟ್ಟಿದ್ದಾರೆ.