` ಕುರುಕ್ಷೇತ್ರದ ಕಾಣಿಕೆಯನ್ನು ಮರೆಯದ ದರ್ಶನ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
muniratna's memorable gift to darshan
Muniratna, Darshan Image

ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ, ಕನ್ನಡ ಚಿತ್ರರಂಗದಲ್ಲೇ ಇತಿಹಾಸ ಸೃಷ್ಟಿಸುತ್ತಿದೆ. ಈ ಐತಿಹಾಸಿಕ ಸಿನಿಮಾ ನಿರ್ಮಿಸುತ್ತಿರುವ ನಿರ್ಮಾಪಕ ಮುನಿರತ್ನ, ದರ್ಶನ್‍ಗೆ ಒಂದು ವಿಶೇಷ ಉಡುಗೊರೆಯನ್ನೂ ಕೊಟ್ಟಿದ್ದಾರೆ. 

ಕುರುಕ್ಷೇತ್ರದಲ್ಲಿ ದರ್ಶನ್ ಬಳಸಿದ್ದ ಗದೆ ಹಾಗೂ ಕಿರೀಟಗಳನ್ನು ದರ್ಶನ್ ಅವರಿಗೇ ಕೊಟ್ಟು ಕಳುಹಿಸಿದ್ದಾರೆ . ಅದು ದರ್ಶನ್ ಚಿತ್ರ ಹಾಗೂ ಪಾತ್ರದ ಮೇಲೆ ತೋರಿಸಿದ ಪ್ರೀತಿ ಹಾಗೂ ಅಭಿಮಾನಕ್ಕೆ ಚಿತ್ರತಂಡ ನೀಡಿರುವ ಪ್ರೀತಿಯ ಕಾಣಿಕೆ.