` ಲವ್ ಯೂ ಅಪ್ಪು ಸರ್ ಅಂದ್ರು ಶ್ರದ್ಧಾ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shraddha feels happy wth
shraddha srinath, Puneeth Rajkumar Image

ಪುನೀತ್ ರಾಜ್‍ಕುಮಾರ್ ಅವರನ್ನು ಕಣ್ಣಾರೆ ಕಂಡವರು, ಜೊತೆಯಲ್ಲಿ ನೋಡಿದವರಿಗೆ ಒಂದು ಶಾಕ್ ಖಂಡಿತಾ ಇರುತ್ತೆ. ಎಷ್ಟೆಂದರೂ ಡಾ.ರಾಜ್ ಪುತ್ರ, ಹ್ಯಾಟ್ರಿಕ್ ಹೀರೋ ತಮ್ಮ, ಸ್ವತಃ ಸ್ಟಾರ್ ನಟ...ಹೀಗೆಲ್ಲ ಇರುವಾಗ ಸ್ವಲ್ಪವಾದರೂ ಅಹಂ ಇದ್ದೇ ಇರುತ್ತೆ ಎಂದುಕೊಂಡವರಿಗೆ ಮೊದಲ ಶಾಕ್ ಸಿಗೋದು ಪುನೀತ್ ಅವರ ಸರಳತೆಯದ್ದು. ಪುನೀತ್ ಅವರ ಸರಳತೆ, ಸಜ್ಜನಿಕೆಗೆ ಮರುಳಾಗದವರೇ ಇಲ್ಲ. ಇದರಿಂದ ಶ್ರದ್ಧಾ ಶ್ರೀನಾಥ್ ಸಹ ಹೊರತಾಗಿಲ್ಲ.

ಇತ್ತೀಚೆಗೆ ಏರ್‍ಪೋರ್ಟ್‍ವೊಂದರಲ್ಲಿ ಶ್ರದ್ಧಾ ಅವರಿಗೆ ಪುನೀತ್ ಆಕಸ್ಮಿಕವಾಗಿ ಎದುರಾಗಿದ್ದಾರೆ. ಅವರ ಜೊತೆ ಮಾತನಾಡಿ ಸೆಲ್ಫೀ ಕ್ಲಿಕ್ಕಿಸಿಕೊಂಡ ಶ್ರದ್ಧಾಗೆ, ಪುನೀತ್ ಅವರ ಸಿಂಪ್ಲಿಸಿಟಿ ಇಷ್ಟವಾಗಿಬಿಟ್ಟಿದೆ. ಆ ಸೆಲ್ಫಿಯನ್ನು ಪೋಸ್ಟ್ ಮಾಡಿರುವ ಶ್ರದ್ಧಾ, ನನ್ನ ಮುಖ ನೋಡಿದರೇ ನಿಮಗೆ ಅರ್ಥವಾಗಿರಬಹುದು. ಖುಷಿಯೇ ಖುಷಿ. ಪುನೀತ್ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ಅವರು ಒಳ್ಳೆಯ ಮಾತು ಹೇಳಿದರು. ಅವರು ಒಬ್ಬ ಸ್ಟಾರ್, ನನಗೆ ಅವನ್ನೆಲ್ಲ ಹೇಳಬೇಕಾಗಿಯೇನೂ ಇರಲಿಲ್ಲ. ಪವರ್‍ಸ್ಟಾರ್ ಮತ್ತು ಸ್ಟಾರ್‍ಗೆ ಇರುವ ವ್ಯತ್ಯಾಸ ಇದು. ಅವರ ಬಗ್ಗೆ ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಅವರ ಭೇಟಿಯಿಂದ ಒಂದು ಸ್ಪಷ್ಟವಾಯಿತು. ಅವರದ್ದು ಬಂಗಾರದಂತಾ ಮನಸ್ಸು. ಲವ್ ಯೂ ಅಪ್ಪು ಸಾರ್ ಎಂದಿದ್ದಾರೆ ಶ್ರದ್ಧಾ.