` ಬಿಗ್‍ಬಾಸ್ ಫಿನಾಲೆ ಶೋ - ಫ್ಯಾನ್ಸ್‍ಗೆ ನೋ ಎಂಟ್ರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
fans entry restricted for the season's finale
Big Boss Season 5

ಬಿಗ್‍ಬಾಸ್ ಶೋ ಫೈನಲ್ ಹಂತ ತಲುಪಿದೆ. ವಿನ್ನರ್ ಯಾರು ಎಂಬುದು ಮುಂದಿನ ವಾರ ಗೊತ್ತಾಗಲಿದೆ. ಸದ್ಯಕ್ಕೆ ಮನೆಯಲ್ಲಿರೋದು ಕಾರ್ತಿಕ್ ಮತ್ತು ಚಂದನ್ ಶೆಟ್ಟಿ. ಇವರಿಬ್ಬರೂ ಈಗಾಗಲೇ ಸೇಫ್. ಇನ್ನು ಉಳಿದಿರುವುದು ದಿವಾಕರ್, ನಿವೇದಿತಾ ಮತ್ತು ಶ್ರುತಿ. ಇವರಲ್ಲಿ ಯಾರು ಗೆಲ್ಲಬಹುದು..? ಅದು ಈಗ ಸಸ್ಪೆನ್ಸ್.

ಆ ಸಸ್ಪೆನ್ಸ್‍ನ್ನು ಕಟ್ಟಕಡೆಯ ಕ್ಷಣದವರೆಗೆ ಉಳಿಸಿಕೊಳ್ಳುವ ಸಲುವಾಗಿ, ಈ ಬಾರಿಯ ಫಿನಾಲೆಯಲ್ಲಿ ಫ್ಯಾನ್ಸ್‍ನ್ನು ಹೊರಗಿಡಲು ನಿರ್ಧರಿಸಲಾಗಿದೆ. ಕಳೆದ ಎರಡೂ ಸೀಸನ್‍ಗಳಲ್ಲಿ ಬಿಗ್‍ಬಾಸ್ ವಿನ್ನರ್ ಹೆಸರು ಶೋ ಪ್ರಸಾರವಾಗುವುದಕ್ಕೆ ಮುನ್ನವೇ ಬಹಿರಂಗವಾಗಿತ್ತು. ಶೋಗೆ ವೀಕ್ಷಕರಾಗಿ ಹೋಗಿದ್ದ ಅಭಿಮಾನಿಗಳು, ಅದನ್ನು ಸೋಷಿಯಲ್ ಮೀಡಿಯಾಗೆ ಹರಿಯಬಿಟ್ಟಿದ್ದರು.

ಹೀಗಾಗಿ ಈ ಬಾರಿ ಬಿಗ್‍ಬಾಸ್ ನಿರ್ಮಾಪಕರು, ಶೋದ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್‍ಬಾಸ್ ಶೋ, ಕರ್ನಾಟಕದಲ್ಲಿನ ಜನಪ್ರಿಯ ರಿಯಾಲಿಟಿ ಶೋ.

Padarasa Movie Gallery

Kumari 21 Movie Gallery