` ಮೈ ಗಢಗಢ ನಡುಗುವ ಚಳಿಯಲ್ಲಿ..ರಿವರ್ ರಾಫ್ಟಿಂಗ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
life jothe ondu selfie team
Life Jothe Ondu Selfie Enjoys River Rafting

ರಿವರ್ ರ್ಯಾಫ್ಟಿಂಗ್ ಅನ್ನೋದು ಅದ್ಭುತ ಅನುಭವ ಕೊಡುತ್ತೆ. ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡೋದು ಸುಲಭದ ಕೆಲಸವಲ್ಲ. ಅದಕ್ಕೆ ಮೊದಲು ಧೈರ್ಯ ಇರಬೇಕು. ಈಜು ಗೊತ್ತಿರಬೇಕು. ಈಜು ಗೊತ್ತಿದ್ದವರಿಗಷ್ಟೇ ಧೈರ್ಯ ಬರಲು ಸಾಧ್ಯ. ಸದ್ಯಕ್ಕೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರತಂಡ ಹಿಮಾಲಯದ ತಪ್ಪಲಲ್ಲಿ ರ್ಯಾಫ್ಟಿಂಗ್ ಮಾಡಿದೆ.

ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್, ಪ್ರೇಮ್, ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿದ್ದಾರೆ. ಇಡೀ ಚಿತ್ರತಂಡ ಹೃಷಿಕೇಶದಲ್ಲಿ ಗಢಗಢ ನಡುಗುವ ಈ ಚಳಿಯಲ್ಲೇ ರ್ಯಾಫ್ಟಿಂಗ್ ಮಾಡಿರುವುದು ವಿಶೇಷ. ಹರಿಪ್ರಿಯಾ, ಪ್ರಜ್ವಲ್, ಪ್ರೇಮ್.. ಎಲ್ಲರೂ.. ಈಜು ಗೊತ್ತಿದ್ದರೂ, ಹರಿಯುವ ನದಿಯಲ್ಲಿ ರ್ಯಾಫ್ಟಿಂಗ್ ಮಾಡುವುದು ವಿಭಿನ್ನ ಅನುಭವ ಎಂದು ಖುಷಿ ಹಂಚಿಕೊಂಡಿದ್ದಾರೆ.

Padarasa Movie Gallery

Kumari 21 Movie Gallery