` ಟಗರು ರಿಲೀಸ್‍ಗೂ ಮೊದಲೇ ಟಗರು 2 ಆರಂಭ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tagaru 2 starts
Tagaru Part 2 Shooting Started

ಟಗರು. ಶಿವರಾಜ್ ಕುಮಾರ್-ಸೂರಿ-ಕೆ.ಪಿ.ಶ್ರೀಕಾಂತ್ ಕಾಂಬಿನೇಷನ್ನಿನ ಸಿನಿಮಾ. ಚಿತ್ರ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮೊದಲ ಚಿತ್ರವೇ ರಿಲೀಸ್ ಆಗಿಲ್ಲ, ಆಗಲೇ 2ನೇ ಭಾಗಕ್ಕೆ ಮುಹೂರ್ತವೂ ಆಗಿಬಿಟ್ಟಿದೆ. ಅದೇ ಕಾಂಬಿನೇಷನ್‍ನಲ್ಲಿ ಟಗರು-2 ಚಿತ್ರದ ಮುಹೂರ್ತ ನೆರವೇರಿದ್ದು, ಶಿವರಾಜ್ ಕುಮಾರ್ ಲಾಂಗ್ ಹಿಡಿಯುವ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.

ಟಗರು ಚಿತ್ರದ ಕೊನೆಯಲ್ಲಿ ಟಗರು ಚಿತ್ರದ 2ನೇ ಭಾಗ ಬರಲಿದೆ ಎಂಬ ಸಂದೇಶವೂ ಇದೆಯಂತೆ. 2ನೇ ಭಾಗ ಬರಲಿದೆ ಎಂಬುದನ್ನು ಸುಮ್ಮನೆ ತೋರಿಸುವ ಬದಲು, ಭಾಗ-2ರ ದೃಶ್ಯವನ್ನೇ ಚಿತ್ರದ ಕೊನೆಯಲ್ಲಿ ಟೀಸರ್‍ನಂತೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆಯಂತೆ.

ಸಾಮಾನ್ಯವಾಗಿ ಚಿತ್ರ ಯಶಸ್ವಿಯಾದ ನಂತರ, 2ನೇ ಭಾಗದ ಬಗ್ಗೆ ಚಿಂತನೆ, ಆಲೋಚನೆ ಶುರುವಾಗುತ್ತೆ. ಆದರೆ, ಟಗರು ಟೀಂ ತುಂಬಾನೇ ಡಿಫರೆಂಟ್. ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ 2ನೇ ಭಾಗಕ್ಕೆ ಮುಹೂರ್ತವನ್ನೇ ಮಾಡಿಬಿಟ್ಟಿದೆ.