` ಚೂರಿಕಟ್ಟೆಯ ಪಾತ್ರಗಳು ಮಾತನಾಡುತ್ತಿವೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
characters speak in churikatte
Churikatte Movie Image

ಚೂರಿಕಟ್ಟೆ, ಟಿಂಬರ್ ಮಾಫಿಯಾದ ಒಳಹೊರಗಿನ ಸತ್ಯಕಥೆಯನ್ನಾಧಿರಿಸಿದ ಚಿತ್ರ. ರಘು ಶಿವಮೊಗ್ಗ ನಿರ್ದೇಶನದ ಸಿನಿಮಾ ಇದೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿರುವ ಪಾತ್ರಗಳು ನಮ್ಮ ನಡುವಿನ ವಾಸ್ತವ ವ್ಯಕ್ತಿಗಳನ್ನು ಪರಿಚಯ ಮಾಡಿಸುತ್ತವೆ. ಒಂದೊಂದು ಪಾತ್ರವೂ ನಮ್ಮ ನಡುವೆಯೇ ಓಡಾಡುತ್ತಿವೆ ಎಂಬ ಅನುಭವ ಮೂಡಿಸುವ ಶಕ್ತಿ, ಚಿತ್ರದಲ್ಲಿದೆ ಎನ್ನುವುದು ನಿರ್ದೇಶಕರ ಭರವಸೆ.

ಸಿನಿಮಾದ ಹೈಲೈಟ್‍ಗಳಲ್ಲಿ ಒಬ್ಬರು ಅಚ್ಯುತ್ ಕುಮಾರ್. ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗ ನಟಿಸಿರುವ ಅಚ್ಯುತ, ಟಿಂಬರ್ ಮಾಫಿಯಾ ವಿರುದ್ಧ ಸಮರವನ್ನೇ ಸಾರುತ್ತಾರೆ. ಇವರಿಗೆ ತದ್ವಿರುದ್ಧವಾದ ಪಾತ್ರ ಮಂಜುನಾಥ್ ಹೆಗ್ಡೆ ಅವರದ್ದು. ಭ್ರಷ್ಟ ಅರಣ್ಯಾಧಿಕಾರಿಯ ಪಾತ್ರ.

ಶರತ್ ಲೋಹಿತಾಶ್ವ, ಟಿಂಬರ್ ಮಾಫಿಯಾದ ಡಾನ್ ಪಾತ್ರದಲ್ಲಿದ್ದರೆ, ಪ್ರಮೋದ್ ಶೆಟ್ಟಿ ಮತ್ತು ಬಾಲಾಜಿ ಶರತ್ ಲೋಹಿತಾಶ್ವ ಗ್ಯಾಂಗ್‍ನ ಸದಸ್ಯರು. ದತ್ತಣ್ಣ, ಮೊಮ್ಮಗನಿಗೊಂದು ಸರ್ಕಾರಿ ನೌಕರಿ ಸಿಗಲಿ ಎಂದು ಹಪಹಪಿಸುವ ಅಜ್ಜ. 

ಚಿತ್ರದ ಸೆಕೆಂಡ್ ಹೀರೋ ವಿವೇಕ್ ಸಿಂಹ. ಇಡೀ ಚಿತ್ರದ ಅತ್ಯಂತ ಪ್ರಮುಖ ಕ್ಯಾರೆಕ್ಟರ್ ವಿವೇಕ್ ಸಿಂಹರದ್ದು. ಯಾಕೆ ಅನ್ನೋದು ಚಿತ್ರಮಂದಿರದಲ್ಲಷ್ಟೇ ತಿಳಿಯಬೇಕಾದ ರಹಸ್ಯ.

Related Articles :-

'Churi Katte' To Release On Jan 26th

Churi Katte Songs Released

Achyuth Kumar's Churi Katte Lauched

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery