ರಾಜು ಕನ್ನಡ ಮೀಡಿಯಂ ಚಿತ್ರತಂಡಕ್ಕೆ ಶುಭವಾಗಲಿ. ಅವರು ಗೆಲುವಿಗೆ ಅರ್ಹರು. ಅಭಿಮಾನಿಗಳೇ, ನಿಮ್ಮಲ್ಲಿ ನನ್ನ ಮನವಿ ಇಷ್ಟೆ. ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ನೋಡಿ. ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ.
ಇದು ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮಾಡಿರುವ ಮನವಿ. ಅಷ್ಟೇ ಅಲ್ಲ, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಬೆಂಬಲಿಸಿದ ಚಿತ್ರಲೋಕ ವೀರೇಶ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಸುದೀಪ್‍ಗೆ ರಾಜು ಕನ್ನಡ ಮೀಡಿಯಂ ಚಿತ್ರತಂಡದ ತಂತ್ರಜ್ಞರು ಹಾಗೂ ನಿರ್ಮಾಪಕರ ಚಿತ್ರದ ಮೇಲಿನ ಪ್ರೀತಿ ಇಷ್ಟವಾಗಿದೆ. ಸಿನಿಮಾ ಬಗ್ಗೆ ಇಷ್ಟೊಂದು ಪ್ಯಾಷನ್ ಇರುವವರು ಸೋಲಬಾರದು ಅನ್ನೋದು ಸುದೀಪ್ ಮನದಾಸೆ.
ಥ್ಯಾಂಕ್ಯೂ ಸುದೀಪ್.