ಅಂಜನಿಪುತ್ರ ಚಿತ್ರ ಒಂದು ಕಡೆ ಥಿಯೇಟರುಗಳಲ್ಲಿ ಭರ್ಜರಿ ಪ್ರರ್ದಶನ ಕಾಣುತ್ತಿರುವಾಗಲೇ, ಅದಕ್ಕಿಂತ ದೊಡ್ಡ ಹವಾ ಎಬ್ಬಿಸಿರುವುದು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡು ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿಸಿಬಿಟ್ಟಿದೆ. ಎಷ್ಟರಮಟ್ಟಿಗೆ ಎಂದರೆ, ಹಾಡಿಗೆ ಅವರವರೇ ಕಾನ್ಸೆಪ್ಟ್ ಮಾಡಿಕೊಂಡು, ಅವರವರೇ ಸ್ಟೆಪ್ಸ್ ಹಾಕಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಉಜಿರೆಯ ಎಸ್‍ಡಿಎಂ ಕಾಲೇಜ್‍ನ ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳ ಸ್ಟೆಪ್ಸ್ ವೈರಲ್ ಆಗಿತ್ತು. ಈಗ ಸಾಫ್ಟ್‍ವೇರ್ ಉದ್ಯೋಗಿಗಳ ಸರದಿ. ಮೈಸೂರಿನ ಇನ್ಫೋಸಿಸ್ ಉದ್ಯೋಗಿಗಳೆಲ್ಲ ಸೇರಿಕೊಂಡು ಚೆಂದ ಚೆಂದ ಚೆಂದ ಚೆಂದ ನನ್ ಹೆಂಡ್ತಿ.. ಹಾಡನ್ನು ಮರುಸೃಷ್ಟಿ ಮಾಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ಪುನೀತ್ ಅಭಿಮಾನಿಗಳಂತೂ ವಿಭಿನ್ನವಾಗಿ ಹಾಡುಗಳನ್ನು ತಾವೇ ಸೃಷ್ಟಿಸಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುತ್ತಿದ್ದಾರೆ. ಹೆಂಡ್ತಿಯನ್ನು ಪ್ರೀತಿಸುವವರು ಯಾರು ತಾನೇ ಹಾಡನ್ನು ನಿರಾಕರಿಸ್ತಾರೆ ಹೇಳಿ.