ಬುಲ್‍ಬುಲ್ ರಚಿತಾ ರಾಮ್, ಅಭಿಮಾನಿಗಳ ಪಾಲಿಗೆ ಡಿಂಪಲ್ ಕ್ವೀನ್. ಈ ಗುಳಿಗೆನ್ನೆಯ ಚೆಲುವೆ ಕೊನೆಗೂ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಅಲ್ಲಲ್ಲ.. ಬಾಯನ್ನೇ ಹಾಕಿದ್ದಾರೆ. ಇಷ್ಟು ದಿನ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದ ರಚಿತಾ ರಾಮ್, ಕೊನೆಗೂ ಡಬ್ಬಿಂಗ್ ಮಾಡೋಕೆ ನಿರ್ಧರಿಸಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಯೆಸ್ ಪಪ್ಪಾ ಚಿತ್ರಕ್ಕೆ ಸ್ವತಃ ರಚಿತಾ ರಾಮ್ ತಮ್ಮ ಧ್ವನಿಯನ್ನೇ ನೀಡಲಿದ್ದಾರಂತೆ. ಇದುವರೆಗೆ ನೀವು ಕೇಳಿದ್ದ ಧ್ವನಿ ರಚಿತಾ ರಾಮ್ ಅವರದ್ದಲ್ಲ ಅನ್ನೋದೂ ನಿಮಗೆ ಗೊತ್ತಿರಲಿ. ನಿರ್ದೇಶಕ ಪ್ರೀತಮ್ ಗುಬ್ಬಿ, ಸ್ವತಃ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ.