Print 
devaraj 3 gante 30 days 30 seconds,

User Rating: 5 / 5

Star activeStar activeStar activeStar activeStar active
 
devaraj image
Devaraj Image From 3 Gante Movie

ಡೈನಮಿಕ್ ಸ್ಟಾರ್ ದೇವರಾಜ್, ಎಂಥಹ ಕಲಾವಿದ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಂಗಭೂಮಿಯಿಂದ ಬಂದಿರುವ, ಚಿತ್ರರಂಗದಲ್ಲೇ ಸುಮಾರು 30 ವರ್ಷ ಕಳೆದಿರುವ ದೇವರಾಜ್, ಎಂತಹ ಪಾತ್ರಗಳನ್ನೇ ಆದರೂ ಲೀಲಾಜಾಲವಾಗಿ ನಟಿಸಬಲ್ಲ ಕಲಾವಿದ. ಅಂತಹ ದೇವರಾಜ್ ಕೂಡಾ ನಟಿಸೋಕೆ ಎರಡು ಬಾರಿ ಯೋಚಿಸುವಂತಹ ಪಾತ್ರವೊಂದು ಬಂದಿತ್ತಂತೆ. ಈ ಪಾತ್ರ ಮಾಡೋಕೆ ನನ್ನಿಂದ ಸಾಧ್ಯಾನಾ ಎಂದು ಯೋಚಿಸಿ, ಆಗಲ್ಲ ಎಂದು ಚಿತ್ರತಂಡಕ್ಕೆ ವಾಪಸ್ ಕಳಿಸಿದ್ದರಂತೆ. ಆದರೂ, ಚಿತ್ರತಂಡದವರು ಹಠ ಬಿಡದೆ.. ದೇವರಾಜ್‍ರನ್ನು ಒಪ್ಪಿಸಿ ಪಾತ್ರವನ್ನು ಮಾಡಿಸಿದ್ದಾರೆ.

ಈ ಪಾತ್ರ ಮಾಡೋಕೆ ನನ್ನಿಂದ ಆಗುತ್ತಾ ಎಂದು ದೇವರಾಜ್ ಯೋಚಿಸುವಂತೆ ಮಾಡಿದ್ದ ಪಾತ್ರ, 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಅಶಕ್ತ ಯೋಧನ ಪಾತ್ರ. ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಮಾತು ಬರಲ್ಲ.. ಇಂಥ ಪಾತ್ರವನ್ನು ನಿಭಾಯಿಸುವುದೇ ಹೇಗೆ ಅನ್ನೋದೇ ದೊಡ್ಡ ಚಾಲೆಂಜ್. ಆದರೆ, ಅಭಿನಯಿಸುತ್ತಾ ಹೋದ ಮೇಲೆ ಸಲೀಸಾಯ್ತು. ನನಗಿಂತ ಹೆಚ್ಚಾಗಿ ಚಿತ್ರತಂಡಕ್ಕೆ ಖುಷಿಯಾಯ್ತು ಎಂದು ಹೇಳಿಕೊಂಡಿದ್ದಾರೆ ದೇವರಾಜ್.

ನನ್ನ ಬಾಡಿ ಲಾಂಗ್ವೇಜ್ ನೊಡಿ ಜನ ನಗಬಹುದೇನೋ ಎಂಬ ಭಯ ಇದೆ. ಆದರೆ, ನಿರ್ದೇಶಕರು ವಿಶ್ವಾಸದಿಂದಿದ್ದಾರೆ. ಜೊತೆಗೆ ಸುಧಾರಾಣಿ ಇದ್ದ ಕಾರಣ, ಅಭಿನಯಿಸೋಕೆ ನನಗೂ ಕಂಪರ್ಟಬಲ್ ಆಗಿತ್ತು ಎಂದು ಹೇಳಿದ್ದಾರೆ ದೇವರಾಜ್. ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.