` ರಕ್ಷಿತ್ ಶೆಟ್ಟಿ 8 ಪ್ಯಾಕ್ ಮಾಡ್ತಾರಂತೆ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rakshit shetty to build 8 packs?
Rakshit Shetty Image

ರಕ್ಷಿತ್ ಶೆಟ್ಟಿ, ಮೊದಲಿನಿಂದಲೂ ಹಾಗೇ. ಆರಂಭದ ಚಿತ್ರದಿಂದಲೂ ಇದುವರೆಗೆ ದಪ್ಪವೂ ಆಗಿಲ್ಲ. ಸಣ್ಣವೂ ಆಗಿಲ್ಲ. ಮಾಸ್ ಇಷ್ಟಪಡುವಂತಹ ಸಾಹಸ ದೃಶ್ಯಗಳಲ್ಲಿ ನಟಿಸುವ ರಿಸ್ಕ್ ತೆಗೆದುಕೊಳ್ಳದ ರಕ್ಷಿತ್ ಶೆಟ್ಟಿ, ಇದುವರೆಗೆ ವಿಭಿನ್ನ ಪಾತ್ರಗಳ ಮೂಲಕವಷ್ಟೇ ಗಮನ ಸೆಳೆದ ನಟ. ಅಂತಹಾ ರಕ್ಷಿತ್ ಶೆಟ್ಟಿ ಈಗ 8 ಪ್ಯಾಕ್ ಆಗುತ್ತಿದ್ದಾರೆ.

ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸುತ್ತಿರುವ ರಕ್ಷಿತ್ ಶೆಟ್ಟಿ, ಚಿತ್ರಕ್ಕಾಗಿ ದೇಹವನ್ನೂ ಹುರಿಗಟ್ಟಿಸುತ್ತಿದ್ದಾರೆ. ಇದುವರೆಗೆ ಚಾಕೊಲೇಟ್ ಹೀರೋ, ಜವಾಬ್ದಾರಿಯುತ ವ್ಯಕ್ತಿ, ಡಾಕ್ಟರ್, ಡಾನ್, ಬೇಜವಾಬ್ದಾರಿ ಹುಡುಗ, ವಿದ್ಯಾರ್ಥಿಯಂತಹ ಪಾತ್ರಗಳಲ್ಲೇ ಮಿಂಚಿದ್ದ ರಕ್ಷಿತ್ ಶೆಟ್ಟಿಗೆ, ಇದು ಹೊಸ ಅನುಭವ.