ಚಿರಂಜೀವಿ ಸರ್ಜಾ ಅವರಿಗೆ ಅರ್ಜುನ್ ಸರ್ಜಾ ಗಾಡ್‍ಫಾದರ್ ಅನ್ನೊದು ರಹಸ್ಯವೇನೂ ಅಲ್ಲ. ಮಾವ ಅರ್ಜುನ್ ಸರ್ಜಾ ಹಾಕಿದ ಗೆರೆಯನ್ನು ಚಿರಂಜೀವಿ ಸರ್ಜಾ ಆಗಲೀ, ಧ್ರುವ ಸರ್ಜಾ ಆಗಲೀ ಇದುವರೆಗೂ ದಾಟಿಲ್ಲ. ಮುಂದೆಯೂ ಅಂತಹ ಯಾವುದೇ ಸೂಚನೆಗಳಿಲ್ಲ. ಹೀಗಿದ್ದರೂ ಅರ್ಜುನ್ ಸರ್ಜಾ ವಿರುದ್ಧವೇ ಚಿರಂಜೀವಿ ಸರ್ಜಾ ನಿಲ್ಲುವಂತಾ ಪರಿಸ್ಥಿತಿ ಎದುರಾಗಿದೆ.
ಚಿರಂಜೀವಿ ಸರ್ಜಾ ನಿರ್ದೇಶನದ ಪ್ರೇಮ ಬರಹ ಚಿತ್ರ ಫೆಬ್ರವರಿ 9ರಂದು ಬಿಡುಗಡೆಯಾಗುತ್ತಿದೆ. ಪ್ರೇಮ ಬರಹ ಚಿತ್ರದ ಹೀರೋಯಿನ್ ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ. ಅದು ಐಶ್ವರ್ಯಾ ಅವರ ಪ್ರಥಮ ಚಿತ್ರವೂ ಹೌದು.
ಅದೇ ದಿನ ಚಿರಂಜೀವಿ ಸರ್ಜಾ ಅಭಿನಯದ ಸಂಹಾರ ಕೂಡಾ ಬಿಡುಗಡೆಯಾಗುತ್ತಿದೆ. ಗುರು ದೇಶ್‍ಪಾಂಡೆ ನಿರ್ದೇಶನದ ಸಂಹಾರ ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ಕುರುಡನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿರಂಜೀವಿ ಸರ್ಜಾ, ಆ ದಿನ ಪೈಪೋಟಿ ನೀಡಬೇಕಿರುವುದು ತನ್ನ ಮಾವನ ನಿರ್ದೇಶನದ, ಮಾವನ ಮಗಳ ಚಿತ್ರಕ್ಕೆ.
ಒಂದೇ ದಿನ, ಒಂದೇ ಕುಟುಂಬದ ಎರಡು ಚಿತ್ರಗಳು ತೆರೆಗೆ ಬರುತ್ತಿರುವುದು ಸ್ಯಾಂಡಲ್‍ವುಡ್ ವಿಶೇಷ ಎಂದಷ್ಟೇ ಈಗ ಹೇಳೋಬಹುದು.