ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಎದುರು ನಿಂತಿದ್ದ ಶ್ವೇತುಸುಂದರಿಯನ್ನ ಇದೇ ಚಿತ್ರಲೋಕದಲ್ಲಿ ಕೆಲವೇ ದಿನಗಳ ಹಿಂದೆ ನೋಡಿದ್ದಿರಿ. ಆದರೆ ಅದು ಟೆಸ್ಟ್ ಡ್ರೈವ್‍ಗಾಗಿ ತರಿಸಿಕೊಂಡಿದ್ದ ಲ್ಯಾಂಬೊರ್ಗಿನಿ. ಈಗ ಆ ಶ್ವೇತ ಸುಂದರಿ ಅಧಿಕೃತವಾಗಿಯೇ ದರ್ಶನ್ ಮನೆಗೆ ಸೇರಿಕೊಂಡಿದ್ದಾಳೆ.
ಸಂಕ್ರಾಂತಿ ಸಡಗರದ ಮಧ್ಯೆಯೇ ಹೊಸ ಕಾರಿಗೂ ಪೂಜೆ ನಡೆದಿದೆ. ಲ್ಯಾಂಬೊರ್ಗಿನಿ ಖರೀದಿಸಿರುವ ಕನ್ನಡ ಚಿತ್ರರಂಗದ ಮೊದಲ ನಟ ದರ್ಶನ್. ಪೂಜೆ ಮಾಡಿಸಿದ ನಂತರ ದರ್ಶನ್, ತಮ್ಮ ಮನೆಯಿಂದ ಮೈಸೂರಿಗೆ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ.
ಈಗಾಗಲೇ ಮನೆಯಲ್ಲಿ 5 ಕಾರುಗಳನ್ನಿಟ್ಟುಕೊಂಡಿರುವ ದರ್ಶನ್‍ಗೆ ಇದು ಹೊಸ ಅತಿಥಿ. 5 ಕೋಟಿಗೂ ಹೆಚ್ಚು ಬೆಲೆ ಬಾಳುವ ಈ ಶ್ವೇತ ಸುಂದರಿ ಈಗ ಪ್ರತಿಷ್ಠೆಯ ಸಂಕೇತವೂ ಹೌದು.
Related Articles :-