ಮಜಾ ಟಾಕೀಸ್. ಸೃಜನ್ ಲೋಕೇಶ್ ನಿರೂಪಣೆಯ ಕಿರುತೆರೆಯ ಕಾಮಿಡಿ ಶೋ. ಈಗ ಮತ್ತೆ ಲಾಂಚ್ ಆಗುತ್ತಿದೆ. ಫೆಬ್ರವರಿಯಲ್ಲಿ ಮಜಾ ಟಾಕೀಸ್ ಮತ್ತೆ ಶುರುವಾಗಲಿದ್ದು, ಅದೇ ಸೃಜನ್ ಟೀಂ ಮುಂದುವರೆಯಲಿದೆ.
ಕಳೆದ ಅಕ್ಟೋಬರ್‍ನಲ್ಲಿ ಮಜಾ ಟಾಕೀಸ್ ಸ್ಟಾಪ್ ಆದಾಗ ಪ್ರೇಕ್ಷಕರು ತುಂಬಾ ಬೇಸರ ವ್ಯಕ್ತಪಡಿಸಿದ್ದರು. ಅದೇ ತಂಡವನ್ನಿಟ್ಟುಕೊಂಡು ಹೊಸ ಶೋ ಶುರು ಮಾಡಿದರೂ, ಮಜಾ ಟಾಕೀಸ್‍ಗೆ ಹೋಲಿಸಿ ಅದರಷ್ಟು ಚೆನ್ನಾಗಿಲ್ಲ ಎನ್ನುತ್ತಿದ್ದರು. ಈಗ ಅವುಗಳಿಗೆಲ್ಲ ಉತ್ತರವೇನೋ ಎಂಬಂತೆ ಮತ್ತೆ ಮಜಾ ಟಾಕೀಸ್ ಶುರುವಾಗುತ್ತಿದೆ. ಫೆಬ್ರವರಿಯಲ್ಲಿ ಮಜಾ ಟಾಕೀಸ್‍ನ ಮೊದಲ ಶೋ ಪ್ರಸಾರವಾಗಲಿದೆ.
ಹೊಸ ಮಜಾ ಶೋನಲ್ಲಿ ಇನ್ನಷ್ಟು ಹೊಸ ಹೊಸ ವಿಷಯ, ಆಟಗಳಿವೆಯಂತೆ. ಜಗತ್ತಿನ ಕನ್ನಡಿಗರನ್ನೆಲ್ಲ ಶೋದ ಭಾಗವಾಗಿಸಿಕೊಳ್ಳುವ ಪ್ರಯತ್ನವಿದೆಯಂತೆ. ಪ್ರೇಕ್ಷಕರಿಗೆ ಖಂಡಿತಾ ಹೊಸ ಮಜಾ ಶೋನಲ್ಲಿ ಒಂದಷ್ಟು ಅಚ್ಚರಿಗಳಿವೆ ಎಂದಿದ್ದಾರೆ ಸೃಜನ್ ಲೋಕೇಶ್.