` ನಿವೇದಿತಾಗೆ ಕೈ ಮುಗಿದ ಕಿಚ್ಚ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep praises niveditha
Sudeep, Niveditha Gowda Image

ಬಿಗ್‍ಬಾಸ್ ಮನೆಯ ಬಾರ್ಬಿ ಡಾಲ್ ನಿವೇದಿತಾ ಗೌಡ, ತಮ್ಮ ಕಂಗ್ಲಿಷ್‍ನಿಂದಲೇ ಫೇಮಸ್ ಆದ ಹುಡುಗಿ. ವಿಚಿತ್ರ ಆ್ಯಕ್ಸೆಂಟ್‍ನ  ಭಾಷೆಯಿಂದಾಗಿ, ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೇ ಫೇಮಸ್ ಆದವರು. ವಯಸ್ಸಿನ್ನೂ ಚಿಕ್ಕದು. ಬಿಕಾಂ ಓದುತ್ತಿರುವ ಈ ಹುಡುಗಿಗೆ ಕನ್ನಡದ ಹಿರಿಯ ನಟ, ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ಕೈ ಮುಗಿದರು ಎಂದರೆ, ನಿವೇದಿತಾ ಅಂಥದ್ದೇನು ಮಾಡಿದರು ಎಂಬ ಕುತೂಹಲ ಸಹಜ.

ಬಿಗ್‍ಬಾಸ್‍ನಲ್ಲಿ ಈ ವಾರ ಅವರ ಕುಟುಂಬದವರೊಂದಿಗೆ ಅರ್ಧ ಗಂಟೆ ಕಳೆಯುವ ಅವಕಾಶ ನೀಡಲಾಗಿತ್ತು. ಆದರೆ, ಅರ್ಧ ಗಂಟೆ ಸಂಪೂರ್ಣ ಇರಬೇಕು ಎಂದರೆ, ಅವರ ಸಹಸ್ಪರ್ಧಿ ಅದಕ್ಕೆ ಸಹಕರಿಸಬೇಕು. ಅರ್ಧ ಗಂಟೆ ಒಂಟಿ ಕಾಲಿನ ಟೇಬಲ್ ಮೇಲಿಟ್ಟ ಮಡಕೆ ಬಿದ್ದು ಒಡೆದು ಹೋಗದಂತೆ ತಡೆಯಬೇಕು. ಒಂಟಿ ಕಾಲಿನಲ್ಲಿ ಸರ್ಕಸ್ ಮಾಡುತ್ತಲೇ ಅದನ್ನು ನಿಭಾಯಿಸಬೇಕು. ಅರ್ಧ ಗಂಟೆ ಹಾಗೆ ನಿಲ್ಲುವುದು ಸುಲಭದ ಮಾತಲ್ಲ.

ಆದರೆ, ಬಿಗ್‍ಬಾಸ್ ಸ್ಪರ್ಧಿ ದಿವಾಕರ್ ಅವರು ತಮ್ಮ ಪತ್ನಿ ಮಮತಾ ಅವರ ಜೊತೆ ಅರ್ಧಗಂಟೆ ಕಳೆಯುವ ಅವಕಾಶ ಸಿಕ್ಕಿತು. ಆ ಅವಕಾಶ ಸಿಗುವಂತೆ ಮಾಡಿದ್ದು ನಿವೇದಿತಾ ಗೌಡ. ಬೇರೆ ಯಾವ ಸ್ಪರ್ಧಿಗಳೂ ಮಾಡದಂತಹಾ ಈ ಸಾಹಸವನ್ನು ಕಷ್ಟಪಟ್ಟು ಮಾಡಿ, ಪತಿ-ಪತ್ನಿಯ ಮಾತುಕತೆಗೆ ಅವಕಾಶ ಕೊಟ್ಟ ನಿವೇದಿತಾ ಗೌಡ, ಅರ್ಧಗಂಟೆ ಕಳೆಯುವಷ್ಟರಲ್ಲಿ ಸುಸ್ತಾಗಿ ಹೋಗಿದ್ದರು.

ಕಿಚ್ಚ ಸುದೀಪ್ ನಿವೇದಿತಾಗೆ ಕೈ ಮುಗಿದದ್ದು ಇದೇ ಕಾರಣಕ್ಕೆ. ನಿಮ್ಮ ಪರಿಶ್ರಮ, ತ್ಯಾಗಕ್ಕೆ ನನ್ನ ಧನ್ಯವಾದ ಎಂದು ಕೈಮುಗಿದರು ಸುದೀಪ್.