ಗುರುನಂದನ್ ಆಂದ್ರೆ ಯಾರು ಅಂತಾ ಕೇಳೋವ್ರು ಕೂಡಾ ಫಸ್ಟ್ Rank ರಾಜು ಅಂದ್ರೆ ಕಣ್ಣರಳಿಸ್ತಾರೆ. ಈ ಬಾರಿ ರಾಜುಗೆ ಅಲಿಯಾಸ್ ಗುರುನಂದನ್‍ಗೆ ಅದೃಷ್ಟ ಖುಲಾಯಿಸಿಟ್ಟಿದೆ. ಅದು ಮೂರ್ ಮೂರು ಹೀರೋಯಿನ್‍ಗಳ ಜೊತೆ ರೊಮ್ಯಾನ್ಸ್ ಮಾಡೋ ಅವಕಾಶ. ಅದು ಒಲಿದಿರೋದು ರಾಜು ಕನ್ನಡ ಮೀಡಿಯಂನಲ್ಲಿ.
ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಮತ್ತು ಏಂಜಲಿನಾ ಎಂಬ ಮೂವರು ತಾರೆಯರಿದ್ದಾರೆ. ಹೈಸ್ಕೂಲ್‍ನಲ್ಲಿಂದಲೇ ಲವ್ ಶುರುವಾಗುತ್ತೆ. ಅಲ್ಲಿ ಆಶಿಕಾ ರಂಗನಾಥ್ ಜೊತೆ. ಆಶಿಕಾ ಜೊತೆಗಿನ ರೋಲ್‍ಗಾಗಿ 15 ಕೆಜಿ ತೂಕ ಇಳಿಸಿಕೊಂಡಿದ್ದರಂತೆ ಗುರುನಂದನ್.
ನಂತರ ಸಾಫ್ಟ್ವೇರ್ ಕಂಪೆನಿ ಉದ್ಯೋಗಿಯಾಗಿ, ಕನ್ನಡದ ಕಂದನಾಗಿ ಆವಂತಿಕಾ ಶೆಟ್ಟಿ ಜೊತೆ ನಟಿಸ್ತಾರೆ ಗುರುನಂದನ್. ಇದಾದ ಮೇಲೇ ಫಾರಿನ್‍ನಲ್ಲಿ ಏಂಜಲಿನಾ ಜೊತೆ ಲವ್. ಈ ಪ್ರೀತಿ, ಪ್ರೇಮ, ಪ್ರಣಯದ ಕಥೆಯನ್ನು ನಗಿಸುತ್ತಲೇ ಹೇಳಿದ್ದಾರೆ ನಿರ್ದೇಶಕ ನರೇಶ್ ಕುಮಾರ್. ನಿರ್ದೇಶಕರ ಕನಸು ನನಸು ಮಾಡೋಕೆ ಎಲ್ಲ ರೀತಿಯ ಸೌಲಭ್ಯವನ್ನೂ ನೀಡಿರುವ ನಿರ್ಮಾಪಕ ಸುರೇಶ್, ಈಗ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.