ರಾಜು ಕನ್ನಡ ಮೀಡಿಯಂ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮುಂದಿನ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ರಾಜು ಹೃದಯ ಕದಿಯುವ ಚೆಲುವೆ. ರಂಗಿತರಂಗದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಆವಂತಿಕಾ ಶೆಟ್ಟಿಗೆ ಇದು 4ನೇ ಸಿನಿಮಾ. ಆರಂಭದಲ್ಲಿ ನಿರ್ಮಾಪಕರ ಜೊತೆ ಮುನಿಸಿಕೊಂಡಿದ್ದ ಆವಂತಿಕಾ, ನಂತರ ಎಲ್ಲವನ್ನೂ ಮರೆತು ಚಿತ್ರವನ್ನು ಯಶಸ್ವಿಯಾಗಿ ಪೂರೈಸಿದ್ಧಾರೆ.
ರಂಗಿತರಂಗದಂತಹ ಚಿತ್ರದಲ್ಲಿ ನಟಿಸಿದ್ದರೂ, ಆವಂತಿಕಾ ಅವರನ್ನು ಅಡಿಷನ್ ಮೂಲಕವೇ ಸಿನಿಮಾಗೆ ಆಯ್ಕೆ ಮಾಡಿಕೊಂಡರಂತೆ ನಿರ್ದೇಶಕ ನರೇಶ್ ಕುಮಾರ್. ಆವಂತಿಕಾ ಕೂಡಾ ಅಷ್ಟೆ, ಯಾವುದೇ ಬಿಗುಮಾನ ಇಟ್ಟುಕೊಳ್ಳದೆ ಅಡಿಷನ್ ಕೊಟ್ಟರು. ಅಷ್ಟೇ ಅಲ್ಲ, ಸೂಪರ್‍ಬೈಕ್ ರೈಡಿಂಗ್ ದೃಶ್ಯವನ್ನೂ ಲೀಲಾಜಾಲವಾಗಿ ನಿರ್ವಹಿಸಿದರು ಎಂದಿದ್ದಾರೆ ನರೇಶ್.
ಆವಂತಿಕಾ ಶೆಟ್ಟಿ ಅವರಿಗೆ ಒಂದು ಅರ್ಬನ್ ಲುಕ್ ಇದೆ. ನಗರದ ಮಾಡರ್ನ್ ಹುಡುಗಿಯಾಗಿ ಆವಂತಿಕಾ ಶೆಟ್ಟಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಚಿತ್ರದ ಪ್ರಮುಖ ನಾಯಕಿ ಅವರೇ ಅಂತಾರೆ ನರೇಶ್. ರಘುನಂದನ್ ಅವರನ್ನು ಯಾರೇ ಇವನು ಕನ್ನಡದ ಕಂದ ಎನ್ನುವ ಆವಂತಿಕಾ, ಚಿತ್ರದ ಟರ್ನಿಂಗ್ ಪಾಯಿಂಟ್ ಕ್ಯಾರೆಕ್ಟರ್.