` ದರ್ಶನ್ ಮನೆಗೆ ಬಂದಳು ಶ್ವೇತಸುಂದರಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
darshan's white beauty car
Darshan's Lamborghini Car

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಗೆ ಹೊಸ ಶ್ವೇತಸುಂದರಿ ಬಂದಿದ್ದಾಳೆ. ಈ ಶ್ವೇತ ಸುಂದರಿ ಎಂದರೆ ಅಂತಿಂಥವಳಲ್ಲ. ಈ ಶ್ವೇತ ಸುಂದರಿಯ ಬೆಲೆ 5 ಕೋಟಿಗೂ ಹೆಚ್ಚು. ರಸ್ತೆಯಲ್ಲಿ ಈಕೆ ಹೋಗುತ್ತಿದ್ದರೆ, ಎಂಥವರೂ ವ್ಹಾವ್ ಎಂದು ತಿರುಗಿ ನೋಡ್ತಾರೆ. ಇಂಥ ಸುಂದರಿಯನ್ನು ಪಡೆದವನೇ ಅದೃಷ್ಟವಂತ ಅಂತಾರೆ. ಅಂಥಾ ಅದೃಷ್ಟವಂತರ ಸಾಲಿಗೆ ಸೇರಿದ್ದಾರೆ ದರ್ಶನ್. ಅಂದಹಾಗೆ ಆ ಶ್ವೇತ ಸುಂದರಿಯ ಹೆಸರು ಲ್ಯಾಂಬೋರ್ಗಿನಿ.

ಈಗಾಗಲೇ ಮನೆಯಲ್ಲಿ ಜಾಗ್ವಾರ್, ಆಡಿ ಕ್ಯೂ, ರೇಂಜ್ ರೋವರ್, ಬೆಂಜ್, ಫಾರ್ಚೂನರ್, ಮಿನಿ ಕೂಪರ್ ಮೊದಲಾದ ಕಾರುಗಳನ್ನು ಹೊಂದಿರುವ ದರ್ಶನ್‍ಗೆ, ಪ್ರಾಣಿಗಳಂತೆಯೇ ಕಾರು, ಬೈಕ್‍ಗಳ ಕ್ರೇಜ್ ಕೂಡಾ ಇದೆ. ಆ ಕ್ರೇಜ್‍ನ ಹೊಸ ಎಂಟ್ರಿಯೇ ಲ್ಯಾಂಬೋರ್ಗಿನಿ. ಇಂಥ ದುಬಾರಿ ಕಾರು ಹೊಂದಿರುವ ಕನ್ನಡದ ಕೆಲವೇ ಸ್ಟಾರ್‍ಗಳಲ್ಲಿ ಒಬ್ಬರು ಚಾಲೆಂಜಿಂಗ್ ಸ್ಟಾರ್ ದರ್ಶನ್.