` ಅಭಿಮಾನಿಗಳೇ.. ಇದು ಮನೋರಂಜನ್ ರವಿಚಂದ್ರನ್ ಮನವಿ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
manoranjan requests fans to watch brihaspathi
Manoranjan In Brihaspathi

ಬೃಹಸ್ಪತಿ. ಇದೇ ವಾರ ರಿಲೀಸ್ ಆಗಿರುವ ಮನೋರಂಜನ್ ರವಿಚಂದ್ರನ್ ಸಿನಿಮಾ. ಸಿನಿಮಾದ ಕಥೆ  ಹಾಗೂ ಸಂದೇಶದ ಬಗ್ಗೆ ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯಗಳು ಕೇಳಿ ಬರುತ್ತಿವೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾಗೆ ನಂದಕಿಶೋರ್ ನಿರ್ದೇಶಕ. 

ಅಭಿಮಾನಿಗಳೇ, ಸಿನಿಮಾವನ್ನು ನೀವು ಥಿಯೇಟರ್‍ಗೆ ಬಂದು ನೋಡಿ. ಚಿತ್ರವನ್ನು ನೀವೇ ಪ್ರೋತ್ಸಾಹಿಸಬೇಕು. ದಯವಿಟ್ಟು ನೀವು ಸಿನಿಮಾ ನೋಡಿ, ನಿಮ್ಮೆ ಸ್ನೇಹಿತರಿಗೂ ಸಿನಿಮಾ ನೋಡುವಂತೆ ತಿಳಿಸಿ. ಚಿತ್ರ ಬಿಡುಗಡೆಯಾದ ನಂತರ ಅಭಿಮಾನಿಗಳಿಗೆ ಸ್ವತಃ ಮನೋರಂಜನ್ ರವಿಚಂದ್ರನ್ ಮನವಿ ಮಾಡಿಕೊಂಡಿರುವುದು ಹೀಗೆ.

ಏಕೆಂದರೆ, ಇನ್ನೆರಡು ವಾರಗಳಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆಯಾಗೋಕೆ ಕ್ಯೂನಲ್ಲಿವೆ. ನಮ್ಮ ಸಿನಿಮಾ ನೋಡಿ, ಬೆಂಬಲಿಸಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ ಮನೋರಂಜನ್ ರವಿಚಂದ್ರನ್.

Gara Gallery

Rightbanner02_butterfly_inside

Paddehuli Movie Gallery