` ಟಗರು ಮತ್ತೆ ಮುಂದಕ್ಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tagaru cutouts in malls
Tagaru Release PostPoned

ಶಿವರಾಜ್ ಕುಮಾರ್-ಸೂರಿ-ಶ್ರೀಕಾಂತ್ ಕಾಂಬಿನೇಷನ್‍ನ ಟಗರು ಸಿನಿಮಾ ಮತ್ತೆ ಮುಂದಕ್ಕೆ ಹೋಗಿದೆ. ಡಿಸೆಂಬರ್‍ನಲ್ಲಿಯೇ ರಿಲೀಸ್ ಎನ್ನಲಾಗುತ್ತಿದ್ದ ಸಿನಿಮಾ, ಜವರಿಗೆ ಫಿಕ್ಸ್ ಆಗಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಿಧಾನವಾಗಿ ಸಾಗುತ್ತಿರುವ ಕಾರಣ, ಚಿತ್ರವನ್ನು ಮತ್ತೆ ಮುಂದಕ್ಕೆ ಹಾಕಲಾಗಿದೆ. ಈಗಿನ ಸುದ್ದಿಗಳ ಪ್ರಕಾರ ಟಗರು ರಿಲೀಸ್ ಆಗೋದು ಫೆಬ್ರವರಿ 9ಕ್ಕೆ.

ಈಗಾಗಲೇ ಟಗರು ಚಿತ್ರದ ಪ್ರಚಾರ ಶುರುವಾಗಿದ್ದು, ಮಾಲ್‍ಗಳು, ಥಿಯೇಟರುಗಳಲ್ಲಿ 8 ಅಡಿಯ ಶಿವಣ್ಣ ಸ್ಟ್ಯಾಂಡಿಗಳನ್ನು ನಿಲ್ಲಿಸಲಾಗಿದೆ. ಆ ಸ್ಟ್ಯಾಂಡಿಗಳ ಎದುರು ಫೋಟೋ ತೆಗೆಸಿಕೊಂಡು ಅಭಿಮಾನಿಗಳು ಸೆಲ್ಫಿ ಕಳಿಸಿದರೆ, ಅದು ಟಗರು ಪೇಜ್‍ನಲ್ಲಿ ಬರಲಿದೆ. 

ಅಭಿಮಾನಿಗಳನ್ನು ಕಾಯಿಸಿ, ಸತಾಯಿಸಿ ಬರುತ್ತಿರುವ ಟಗರು ಸಿನಿಮಾ, ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿರುವುದು ಸುಳ್ಳಲ್ಲ.

Kurukshetra Celebrity Show Gallery

Rightbanner02_gimmick_inside

Nanna Prakara Movie Images