Print 
yash, manoranjan brihaspathi,

User Rating: 0 / 5

Star inactiveStar inactiveStar inactiveStar inactiveStar inactive
 
yash wishes manoranjan
Yash, Manoranjan Image

ಮನೋರಂಜನ್ ರವಿಚಂದ್ರನ್ ಅಭಿನಯದ ಬೃಹಸ್ಪತಿ ಚಿತ್ರ ಈ ದಿನ ರಿಲೀಸ್. ಮಿಶ್ಮಿ ಚಕ್ರವರ್ತಿ ನಾಯಕಿಯಾಗಿರುವ ಚಿತ್ರಕ್ಕೆ ನಂದಕಿಶೋರ್ ನಿರ್ದೇಶನವಿದೆ. ಚಿತ್ರವನ್ನು ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಹಾಗೆ ಎದುರು ನೋಡುತ್ತಿರುವವರಲ್ಲಿ ನಾನೂ ಕೂಡಾ ಒಬ್ಬ ಎಂದಿದ್ದಾರೆ ರಾಕಿಂಗ್ ಸ್ಟಾರ್ ಯಶ್.

ಮನೋರಂಜನ್ ಅವರ ಡೆಡಿಕೇಶನ್ ತುಂಬಾ ಇಷ್ಟ. ಮನು ಡ್ಯಾನ್ಸ್, ಫೈಟ್ ಪ್ರಾಕ್ಟೀಸ್ ಮಾಡಿರುವುದನ್ನು ನಾನೂ ನೋಡಿದ್ದೇನೆ. ಹಾಡುಗಳು ಸೂಪರ್ ಆಗಿವೆ. ಸಿನಿಮಾ ನೋಡೋಕೆ ನಾನೂ ಕಾಯ್ತಿದ್ದೇನೆ. ನೀವು ನೋಡಿ. ಶುಭ ಹಾರೈಸಿ ಎಂದು ಹೇಳಿದ್ದಾರೆ ಯಶ್.

ಹರಿಕೃಷ್ಣ ಅವರ ಮ್ಯೂಸಿಕ್‍ನಲ್ಲಿ ಹಾಡುಗಳು ಅದ್ದೂರಿಯಾಗಿ ಬಂದಿವೆ. ಚಿತ್ರದ ಟ್ರೇಲರ್ ಕೂಡಾ ಅಭಿಮಾನಿಗಳಿಗೆ ಇಷ್ಟವಾಗಿದೆ. ಇಂದಿನಿಂದ ಬೃಹಸ್ಪತಿ ಪ್ರೇಕ್ಷಕರ ಮಡಿಲಿಗೆ ಸೇರಿದ್ದಾನೆ.