` ಯೋಗರಾಜ್ ಭಟ್ಟರಿಗೆ ಒಲಿದ ಅಕ್ಷರಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yograj bhatt's heroine fr his next
Yograj Bhatt, Akshara Gowda Image

ಅದರಲ್ಲೇನಿದೆ ವಿಶೇಷ. ಯೋಗರಾಜ್ ಭಟ್ಟರಿಗೆ ಅಕ್ಷರಗಳು ಒಲಿದಿರೋದಕ್ಕೆ ಅಂತಹ ಹಾಡು, ಸಾಹಿತ್ಯ, ಸಂಭಾಷಣೆ ಹೊರಹೊಮ್ಮೋದು ಅಂತೀರೇನು. ನಾವು ಹೇಳ್ತಿರೋದು ಅಕ್ಷರಗಳ ಬಗ್ಗೆ ಅಲ್ಲ. ಅಕ್ಷರಾಳ ಬಗ್ಗೆ. ಯೋಗರಾಜ ಭಟ್ಟರ ಹೊಸ ಸಿನಿಮಾಗೆ ನಾಯಕಿಯಾಗಿ ಅಕ್ಷರಾ ಗೌಡ ಆಯ್ಕೆಯಾಗಿದ್ದಾರೆ.

ವಿಹಾನ್ ಗೌಡ ನಾಯಕರಾಗಿರುವ ಚಿತ್ರಕ್ಕೆ ಕಥೆ ಬರೆದಿರುವುದು ಮಾಸ್ತಿ & ಕಾಂತರಾಜ್. ಕಾಲು ಕೇಜಿ ಪ್ರೀತಿ ಚಿತ್ರದ ಮೂಲಕ ಎಂಟ್ರಿ ಕೊಟ್ಟ ವಿಹಾನ್ ಗೌಡಗೆ ಇದು 2ನೇ ಸಿನಿಮಾ. ಯುವ ಜನಾಂಗ ಮತ್ತು ಹಿರಿಯರ ಎರಡು ಪೀಳಿಗೆಗಳ ನಡುವಿನ ತಿಕ್ಕಾಟ ಚಿತ್ರದಲ್ಲಿರಲಿದೆ ಎಂದಿದ್ದಾರೆ ಯೋಗರಾಜ್ ಭಟ್.

ಚಿತ್ರಕ್ಕೆ ಟೈಟಲ್ ಇನ್ನೂ ಫಿಕ್ಸ್ ಆಗಿಲ್ಲ. ಭಟ್ಟರ ತಲೆಯಲ್ಲಿ ಯಾವ ಟೈಟಲ್ ಮಿನುಗುತ್ತಿದೆಯೋ..?

I Love You Movie Gallery

Rightbanner02_butterfly_inside

Paddehuli Movie Gallery