Print 
duniya vijay, r chandru, kanaka,

User Rating: 5 / 5

Star activeStar activeStar activeStar activeStar active
 
duniya vijay r chanru's friendship story
Duniya Viajy, R Chandru Image

ಆರ್. ಚಂದ್ರು ಮತ್ತು ದುನಿಯಾ ವಿಜಯ್. ಇಬ್ಬರಿಗೂ ಈಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರಿದೆ. ಒಬ್ಬರು ಸ್ಟಾರ್ ಡೈರೆಕ್ಟರ್. ಮತ್ತೊಬ್ಬರು ಸ್ಟಾರ್ ನಟ. ಒಂದಾನೊಂದು ಕಾಲದಲ್ಲಿ ಹೀಗಿರಲಿಲ್ಲ. ಇಬ್ಬರೂ ಅವಕಾಶಕ್ಕಾಗಿ ಎದುರು ನೋಡುತ್ತಾ ಸಿಕ್ಕ ಸಿಕ್ಕ ಸಣ್ಣ ಅವಕಾಶಗಳನ್ನೂ ಬಿಡದೆ ದುಡಿಯುತ್ತಿದ್ದರು. ಈಗ ನಾವು ಹೇಳ್ತಿರೋದು ಆಗಿನ ಕಾಲದ ಕಥೆ.

ಆಗ ಆರ್.ಚಂದ್ರು ಅಸಿಸ್ಟೆಂಟ್ ಡೈರೆಕ್ಟರ್. ಧಾರಾವಾಹಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು, ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿಬಿಟ್ಟರು. ಅದೇನೂ ದೊಡ್ಡ ಪಾತ್ರವಾಗಿರಲಿಲ್ಲ. ಆದರೆ, ನಿರ್ದೇಶಕರಿಗೆ ಆ ಪಾತ್ರವನ್ನು ವಿಜಯ್ ಅವರಿಂದ ಮಾಡಿಸಿದ್ದು ಇಷ್ಟವಾಗಲಿಲ್ಲ. ಅವರ ಮನಸ್ಸಿನಲ್ಲಿ ಇನ್ಯಾರೋ ಇದ್ದರು. ಹೀಗಾಗಿ ಸಿಟ್ಟಿಗೆದ್ದ ನಿರ್ದೇಶಕರು ಅಂದ್ರು ಚಂದ್ರು ಅವರನ್ನೇ ಅಸಿಸ್ಟೆಂಟ್ ಡೈರೆಕ್ಟರ್ ಸ್ಥಾನದಿಂದ ಕಿತ್ತು ಹಾಕಿದ್ದರು.

ಆಗ ಆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕೆ.ಪಿ. ನಂಜುಂಡಿ, ಚಂದ್ರು ಅವರು ಟೀಂನಲ್ಲಿರಲೇಬೇಕು ಎಂದು ಹಠ ಮಾಡಿದ ಕಾರಣ, ಚಂದ್ರು ಮತ್ತೆ ಕೆಲಸ ಗಿಟ್ಟಿಸಿಕೊಂಡಿದ್ದರು. ಈಗ ಕಾಲ ಬದಲಾಗಿದೆ. ಆರ್.ಚಂದ್ರು ಈಗ ಕನ್ನಡದ ಸ್ಟಾರ್ ಡೈರೆಕ್ಟರ್ ಕಂ ಪ್ರೊಡ್ಯೂಸರ್ ಆಗಿದ್ದಾರೆ. ದುನಿಯಾ ವಿಜಯ್ ಸ್ಟಾರ್ ಆಗಿದ್ದಾರೆ. ಇಬ್ಬರೂ ಸೇರಿ ಕನಕ ಅನ್ನೋ ಚಿತ್ರ ಮಾಡಿ ರಿಲೀಸ್‍ಗೆ ರೆಡಿಯಾಗಿದ್ದಾರೆ. ಅಂದು ತಮ್ಮ ಕೆಲಸ ಉಳಿಸಿದ್ದ ನಂಜುಂಡಿಯವರಿಗೆ ತಮ್ಮ ಚಿತ್ರದಲ್ಲೊಂದು ಪಾತ್ರ ನೀಡಿ ಆರ್.ಚಂದ್ರು ಖುಷಿಯಾಗಿದ್ದಾರೆ. ಎಲ್ಲ ಕಾಲದ ಮಹಿಮೆ.