` ಕನ್ನಡಕ್ಕೆ ಬರುತ್ತಿದ್ದಾರೆ ಎ.ಆರ್.ರೆಹಮಾನ್ ತಂಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
a r rahaman's sister
A R Reihana Imagae

ಎ.ಆರ್.ರೆಹಮಾನ್, ಆಸ್ಕರ್ ಪುರಸ್ಕøತ ಸಂಗೀತ ನಿರ್ದೇಶಕ. ಸಂಗೀತದಲ್ಲೇ ಮಂತ್ರಮುಗ್ಧಗೊಳಿಸುವ ರೆಹಮಾನ್ ಅವರ ಕೀರ್ತಿ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿಗೇ ಹಬ್ಬಿದೆ. ರೆಹಮಾನ್ ಅವರ ಚಿತ್ರಗಳ ಮ್ಯೂಸಿಕ್‍ನ್ನು ಕನ್ನಡದ ಕೆಲವು ಚಿತ್ರಗಳಲ್ಲಿ ಯಥಾವತ್ತಾಗಿ ಬಳಸಿಕೊಂಡಿದ್ದರೂ, ಕನ್ನಡ ಚಿತ್ರಕ್ಕಾಗಿಯೇ ಸಂಗೀತ ಸಂಯೋಜಿಸಿರುವ ಉದಾಹರಣೆಗಳಿಲ್ಲ. ಆದರೆ, ರೆಹಮಾನ್ ಬರದಿದ್ದರೆ ಏನಂತೆ, ಈಗ ಅವರ ತಂಗಿ ಕನ್ನಡ ಚಿತ್ರವೊಂದಕ್ಕೆ ಸಂಗೀತ ನೀಡುತ್ತಿದ್ದಾರೆ.

ರೆಹಮಾನ್ ಅವರ ತಂಗಿ ರೆಹನಾ, ಕನ್ನಡದ ಲೈಲಾ ಎಂಬ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಕಥೆಗೆ ಹಾಲಿವುಡ್ ಶೈಲಿಯ ಸಂಗೀತ ಬೇಕು ಎನಿಸಿದ ಹಿನ್ನೆಲೆಯಲ್ಲಿ ಲೈಲಾ ಅವರನ್ನು ಕೇಳಿದೆ. ಕಥೆ ಕೇಳಿದ ಅವರು ಹಿನ್ನೆಲೆ ಸಂಗೀತ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಲೈಲಾ ಚಿತ್ರದ ನಿರ್ದೇಶಕ ಸೂರಜ್. ಚಿತ್ರದ ನಾಯಕ ಕೂಡಾ ಸೂರಜ್ ಅವರೇ.

ಚಿತ್ರಕ್ಕೆ ರೆಹನಾ ಕೇವಲ ಹಿನ್ನೆಲೆ ಸಂಗೀತವನ್ನಷ್ಟೇ ನೀಡುತ್ತಿದ್ದಾರೆ. ಉಳಿದಂತೆ ಒಟ್ಟಾರೆ ಸಂಗೀತ ನಿರ್ದೇಶನದ ಹೊಣೆ ಸೂರಜ್ ಕಮಲ್ ಅವರದ್ದು. ಬಿಂಬಿಕಾ ಎಂಬ ಹೊಸ ಪ್ರತಿಭೆ ಚಿತ್ರದ ನಾಯಕಿ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ, ಪ್ರವೀಣ್ ಕೂಡಾ ಚಿತ್ರದ ತಾರಾಬಳಗದಲ್ಲಿದ್ದಾರೆ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery