` ಕೆ.ಎಸ್.ಅಶ್ವತ್ಥ್ ಪುತ್ರ ಟ್ಯಾಕ್ಸಿ ಡ್ರೈವರ್ ಆಗಿದ್ದು ಏಕೆ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ks ashwath's son is a taxi driver
KS Ashwath's son Shankar Ashwath

ಹಿರಿಯ ನಟ ಕೆ.ಎಸ್. ಅಶ್ವತ್ಥ್, ಕನ್ನಡ ಚಿತ್ರರಂಗದ ಚಾಮಯ್ಯ ಮೇಷ್ಟ್ರು ಎಂದೇ ಫೇಮಸ್. ಅವರು ನಟಿಸಿದ ಮನಮಿಡಿಯುವ ಪಾತ್ರಗಳು ಎಣಿಕೆಗೆ ಸಿಗದಷ್ಟು. ಕನ್ನಡಿಗರ ಹೃದಯದಲ್ಲಿ ಜೀವಂತವಾಗಿರುವ ಆ ಹಿರಿಯ ಕಲಾವಿದನ ಮಗ ಶಂಕರ್ ಅಶ್ವತ್ಥ್. ಶಂಕರ್ ಅಶ್ವತ್ಥ್ ಕೂಡಾ ಹಲವು ಚಿತ್ರಗಳಲ್ಲಿ ಪೋಷಕ ನಟನಾಗಿ, ಖಳನಟನಾಗಿ ನಟಿಸಿದ್ದ ಕಲಾವಿದ. 

ಆದರೆ, ಚಿತ್ರರಂಗದಲ್ಲಿ ಅವಕಾಶಗಳಿಲ್ಲದೆ ಉಬರ್ ಟ್ಯಾಕ್ಸಿ ಓಡಿಸುತ್ತಿದ್ದಾರೆ. ಮೈಸೂರಿನಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಶಂಕರ್ ಅಶ್ವತ್ಥ್, ಇದು ಕೂಡಾ ಗೌರವಯುತ ಕೆಲಸವೇ. ನಾನು ಜೀವನಕ್ಕಾಗಿ ಈ ಕೆಲಸ ಮಾಡುತ್ತಿದ್ದೇನೆ. ಅದರಲ್ಲೇನೂ ಬೇಸರವಿಲ್ಲ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ತಾರೆ.

30 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆದರೆ, ಅವಕಾಶಗಳ ಕೊರತೆ ಇದೆ. ಚಿತ್ರರಂಗವನ್ನಷ್ಟೇ ನಂಬಿಕೊಂಡರೆ ಬದುಕು ಸಾಗಿಸುವುದು ಕಷ್ಟ ಎನ್ನುವ ಶಂಕರ್ ಅಶ್ವತ್ಥ್, ಎಲ್ಲಿಯೂ ಚಿತ್ರರಂಗವನ್ನು ದೂಷಿಸುವುದಿಲ್ಲ ಎನ್ನುವುದು ವಿಶೇಷ.

ಜ.19ರಂದು ಕೆ.ಎಸ್.ಅಶ್ವತ್ಥ್ ಅವರ ಪುಣ್ಯತಿಥಿ. ಆ ದಿನದ ಶ್ರಾದ್ಧವನ್ನು ಶಂಕರ್ ಅಶ್ವತ್ಥ್ ಅವರೇ ಮಾಡಬೇಕು. ಅವರ ಮನೆಯ ಸಂಪ್ರದಾಯದ ಪ್ರಕಾರ, ಅದಕ್ಕಾಗಿ ಯಾವುದೇ ಸಾಲ ಮಾಡುವಂತಿಲ್ಲ. ಹೀಗಾಗಿ ತಂದೆಯ ಶ್ರಾದ್ಧಕ್ಕಾಗಿ ಹಣ ಒಟ್ಟುಗೂಡಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಶಂಕರ್ ಅಶ್ವತ್ಥ್.

Johnny Johnny Yes Papa Movie Gallery

Rightbanner02_statement_inside

Dalapathi Movie Gallery