ವಕೀಲರ ಕುರಿತು ಆಕ್ಷೇಪಾರ್ಹ ಸಂಭಾಷಣೆ ಇದ್ದದ್ದನ್ನು ಪ್ರಶ್ನಿಸಿ ಕೆಲವು ವಕೀಲರು ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಿದ್ದ ನ್ಯಾಯಾಲಯ, ನಿಷೇಧ ಜಾರಿಯಾಗದೇ ಇರುವದನ್ನು ಗಂಭೀರವಾಗಿ ಪರಿಗಣಿಸಿತ್ತು. ಖುದ್ದು ಡಿಜಿಪಿಯವರಿಗೇ ಆದೇಶವನ್ನು ಜಾರಿಗೆ ತರಲು ಸೂಚನೆ ನೀಡಿತ್ತು. ಈ ಮಧ್ಯೆ ಆಕ್ಷೇಪಾರ್ಹ ಸಂಭಾಷಣೆಯನ್ನು ಸೆನ್ಸಾರ್ ಮಾಡಿಸಿದ್ದ ಚಿತ್ರತಂಡ ವಕೀಲರ ಕ್ಷಮೆ ಕೇಳಿತ್ತು. ಈಗ ಪ್ರದರ್ಶನವಾಗುತ್ತಿರುವ ಅಂಜನಿಪುತ್ರ ಚಿತ್ರದಲ್ಲಿ ಆ ಡೈಲಾಗ್ ಇಲ್ಲ.
ಈ ಹಿನ್ನೆಲೆಯಲ್ಲಿ ದೂರುದಾರ ವಕೀಲರು ಕೂಡಾ ಚಿತ್ರತಂಡ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ದೂರು ವಾಪಸ್ ತೆಗೆದುಕೊಳ್ಳಲು ಮುಂದಾದರು. ಎರಡೂ ಕಡೆಯ ವಕೀಲರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಅಂಜನಿಪುತ್ರ ಪ್ರದರ್ಶನಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ. ಅದ್ದೂರಿ ಪ್ರದರ್ಶನ ಕಾಣುತ್ತಿರುವ ಪುನೀತ್ ರಾಜ್ಕುಮಾರ್ ಅಭಿನಯದ ಚಿತ್ರ ನಿರಾತಂಕವಾಗಿ ಚಿತ್ರಮಂದಿರಗಳಲ್ಲಿ ಮುಂದುವರಿಯಲಿದೆ.