` ಹೊಂಬಣ್ಣ ಚಿತ್ರದ ನಾಯಕ ಅತ್ಯಾಚಾರ ಮಾಡಿದನಾ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
hombanna hero accused of rape?
Hombanna Hero Subramanya

ಹೊಂಬಣ್ಣ. ಇದೇ ವರ್ಷ ತೆರೆಗೆ ಬಂದಿದ್ದ ಚಿತ್ರ. ಬಾಕ್ಸಾಫೀಸ್‍ನಲ್ಲಿ ದೊಡ್ಡ ಸದ್ದು ಮಾಡದೇ ಹೋದರೂ, ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಚಿತ್ರದ ಕಥೆ, ಸಂದೇಶ ಇಷ್ಟವಾಗಿತ್ತು. ಅಂಥಾದ್ದೊಂದು ಮಾದರಿ ಚಿತ್ರದಲ್ಲಿ ನಟಿಸಿದ್ದ ನಾಯಕನ ವಿರುದ್ಧ ಈಗ ಅತ್ಯಾಚಾರದ ಆರೋಪ ಕೇಳಿಬಂದಿದೆ.

ಚಿತ್ರದ ನಾಯಕ ನಟ ಸುಬ್ರಹ್ಮಣ್ಯ ವಿರುದ್ಧ ಯುವತಿಯೋರ್ವಳು, ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಹಾಗೆಂದು ಆಕೆ ತೀರಾ ಅಪರಿಚತಳೇನೂ ಅಲ್ಲ. ಎರಡೂ ಕುಟುಂಬದವರು ಪರಸ್ಪರ ಪರಿಚಿತರೇ ಆಗಿದ್ದರು.  ಇಬ್ಬರಿಗೂ 2 ವರ್ಷಗಳಿಂದ ಗೆಳೆತನವಿತ್ತು. ಪ್ರೀತಿಯೂ ಇತ್ತು. ಹೀಗಿದ್ದರೂ ತಂಪು ಪಾನೀಯದಲ್ಲಿ ಮತ್ತಿನ ಮಾತ್ರೆ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ದೂರು ಕೊಟ್ಟಿದ್ದಾರೆ.

ಹೀಗೆ ಅತ್ಯಾಚಾರ ಎಸಗಿದ ನಂತರ ನನ್ನನ್ನು ನಿರ್ಲಕ್ಷಿಸಿದ. ನಾನು ಸಿನಿಮಾ ಮಾಡಬೇಕು. ಕನಿಷ್ಠ 20 ಲಕ್ಷ ರೂಪಾಯಿಯಾದರೂ ಬೇಕು ಎನ್ನುತ್ತಿದ್ದ. ಸಿನಿಮಾ ರಂಗದವರು ಬಂದರೆ ಅವರ ಜೊತೆ ಕೋ ಆಪರೇಟ್ ಮಾಡು. ನಿನ್ನನ್ನೇ ಮದುವೆಯಾಗುತ್ತೇನೆ ಎನ್ನತೊಡಗಿದ. ಜೀವಬೆದರಿಕೆಯನ್ನೂ ಹಾಕಿದ್ದಾನೆ ಎಂದು ದೂರಿದ್ದಾರೆ.

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಫ್‍ಐಆರ್ ರಿಜಿಸ್ಟರ್ ಆಗಿದೆ. ದೂರು ದಾಖಲಾದ ನಂತರ ಆರೋಪಿ ನಟ ಸುಬ್ರಹ್ಮಣ್ಯ ತಲೆ ಮರೆಸಿಕೊಂಡಿದ್ದಾರೆ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery