ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದಲ್ಲಿ ವಕೀಲರ ಕುರಿತ ಒಂದು ಅವಹೇಳನಕಾರಿ ಡೈಲಾಗ್ ಬಗ್ಗೆ ಕೆಲವು ವಕೀಲರು ಅಸಮಾಧಾನ ವ್ಯಕ್ತಪಡಿಸಿದ್ದರು. ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಕುರಿತು ತಕ್ಸಣ ಸ್ಪಂದಿಸಿರುವ ಅಂಜನಿಪುತ್ರ ಚಿತ್ರತಂಡ, ಚಿತ್ರದಲ್ಲಿನ ಆ ಡೈಲಾಗ್‍ನ್ನು ಕಟ್ ಮಾಡಿದೆ. ಚಿತ್ರವನ್ನು ಮತ್ತೆ ಸೆನ್ಸಾರ್ ಮಾಡಿಸಿ, ಪ್ರಮಾಣಪತ್ರವನ್ನೂ ಪಡೆದುಕೊಂಡಿದೆ.
ರವಿಶಂಕರ್ ಹೇಳುವ ಆ ಡೈಲಾಗ್‍ನ್ನು ಸೆನ್ಸಾರ್ ಮಾಡಿಸಿ ಪ್ರದರ್ಶನ ಮಾಡಲಾಗುತ್ತಿದೆ. ಈಗ ಪ್ರದರ್ಶನವಾಗುತ್ತಿರುವ ಚಿತ್ರದಲ್ಲಿ ಆ ವಿವಾದಾತ್ಮಕ ಸಂಭಾಷಣೆ ಇಲ್ಲ. ಆ ಸಂಭಾಷಣೆಯಿಂದ ವಕೀಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮಿಸಿ ಎಂದು ಚಿತ್ರತಂಡ ಕ್ಷಮೆಯಾಚಿಸಿದೆ.
Related Articles :-
Anjaniputra Advocate Scene Deleted
Anjaniputra Screening Will Not Stop
Shocking Order in Anjaniputra Case; Why Is Censor Board Required?
ಅಂಜನಿಪುತ್ರಕ್ಕೆ ಪ್ರದರ್ಶನಕ್ಕೆ ನ್ಯಾಯಾಲಯ ತಡೆ - ಕಾನೂನು ಹೇಳೋದೇನು..?