ಚಮಕ್ ಟೀಸರ್ ನೋಡಿದವರಿಗೆಲ್ಲ ಕಾಡ್ತಾ ಇರೋ ಒಂದೇ ಪ್ರಶ್ನೆ ಏನೆಂದರೆ, ಇದು ಗಣೇಶ್ ಸ್ಟೈಲ್ ಸಿನಿಮಾನಾ..? ಸುನಿ ಸ್ಟೈಲ್ ಸಿನಿಮಾನಾ ಅನ್ನೋದು. ಗಣೇಶ್ ಚಿತ್ರಗಳಲ್ಲಿ ತುಂಟತನವಿರುತ್ತದೆಯಾದರೂ ಅದೊಂದು ಗೆರೆ ದಾಟದಂತೆ ನೋಡಿಕೊಳ್ತಾರೆ. ಸುನಿ, ಒಂದು ಗೆರೆ ದಾಟಿದರೂ, ಮುಜುಗರವಾಗದಂತೆ ನೋಡಿಕೊಳ್ತಾರೆ. ಹೀಗಿರುವಾಗ ಚಮಕ್ ಹೇಗಿರಬಹುದು ಅನ್ನೋ ಕುತೂಹಲಕ್ಕೆ ಸ್ವತಃ ಗಣೇಶ್ ಉತ್ತರ ಕೊಟ್ಟಿದ್ದಾರೆ.
ಗಣೇಶ್ ಚಿತ್ರದಲ್ಲಿ ಬಿಯರ್ ಮಾದರಿಯ ವೋಡ್ಕಾ ಇದ್ದ ಹಾಗೆ. ರಶ್ಮಿಕಾ ನೀರಿನ ಹಾಗೆ ಕಾಣೋ ತೀರ್ಥ ಇದ್ದ ಹಾಗೆ. ಅಂದ್ರೆ ಇಷ್ಟೆ, ಗಣೇಶ್ ಮೇಲ್ನೋಟಕ್ಕೆ ಸಭ್ಯಸ್ಥನ ಪೋಸು ಕೊಟ್ಟಿರುವ ತುಂಟ ಹುಡುಗ. ರಶ್ಮಿಕಾ ಮೇಲ್ನೋಟಕ್ಕೆ ಸರಳ ಯುವತಿಯಂತೆ ಕಾಣುವ ಮುಗ್ದ, ಸಂಪ್ರದಾಯಸ್ಥ ಹುಡುಗಿ.
ನೀರು, ವೋಡ್ಕಾ ಮಿಕ್ಸ್ ಆಗುತ್ತೆ. ತೀರ್ಥ, ವೋಡ್ಕಾ ಮಿಕ್ಸ್ ಆಗುತ್ತಾ..? ಮಿಕ್ಸ್ ಆದರೆ ಹೇಗಿರುತ್ತೆ..? ಅದನ್ನು ಚಮಕ್‍ನಲ್ಲೇ ನೋಡಬೇಕು. ಮತ್ಯಾಕ್ ತಡ..