` ಜನವರಿ 19ಕ್ಕೆ ಶ್ರೀನಿವಾಸ ರಾಜು ರ 3 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srinivas raju's 3
Pooja Gandhi In 3

ಮೊದಲು ದಂಡುಪಾಳ್ಯ.. ನಂತರ ಅದೇ ಚಿತ್ರದ ಮುಂದುವರಿದ ಭಾಗ 2. ಎರಡೂ ಚಿತ್ರಗಳಾದ ಮೇಲೆ ಈಗ 3 ಸಿನಿಮಾ ಬರುತ್ತಿದೆ. ನಿರ್ದೇಶಕ ಶ್ರೀನಿವಾಸ ರಾಜು ಹೇಳಿದಂತೆ 3ನೇ ಭಾಗವನ್ನೂ ತೆರೆಗೆ ತರಲು ಸಿದ್ಧರಾಗಿದ್ದಾರೆ. 3 ಸಿನಿಮಾ ಬಿಡುಗಡೆಗೆ ಜನವರಿ 19ರ ದಿನಾಂಕ ಫಿಕ್ಸ್ ಆಗಿದೆ.

ಪೂಜಾಗಾಂಧಿ, ರವಿಶಂಕರ್, ಮಕರಂದ್, ರವಿಕಾಳೆ, ಶ್ರುತಿ, ಮುನಿ, ಪೆಟ್ರೋಲ್ ಪ್ರಸನ್ನ, ಸಂಜನಾ, ಕರಿಸುಬ್ಬು, ಡ್ಯಾನಿ ಕುಟ್ಟಪ್ಪ ಹೀಗೆ ಎಲ್ಲ ಕಲಾವಿದರು ಈ ಚಿತ್ರದಲ್ಲೂ ಇದ್ದಾರೆ. 2 ಚಿತ್ರ ರಿಲೀಸ್ ಆದಾಗ ಸಂಜನಾ ಅವರ ಬೆತ್ತಲೆ ಬೆನ್ನು ಭಾರಿ ಸದ್ದು ಮಾಡಿತ್ತು. ಚಿತ್ರದಲ್ಲಿ ತನಗೆ ಸೂಕ್ತ ಪ್ರಾಶಸ್ತ್ಯ ಸಿಕ್ಕಿಲ್ಲ ಎಂದು ಸಂಜನಾ ಹೇಳಿಕೊಂಡಿದ್ದು ಸಂಜನಾ ಮತ್ತು ಪೂಜಾ ಗಾಂಧಿ ಮಧ್ಯೆ ಸಣ್ಣ ಜಗಳಕ್ಕೂ ಕಾರಣವಾಗಿತ್ತು. ಈಗ 3 ಸಿನಿಮಾ ಬರುತ್ತಿದೆ. ವಿವಾದಗಳೂ ಬರುತ್ತವಾ..? ನೋಡೋಣ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery