` ಮಗನ ಸಿನಿಮಾಗಾಗಿ ಸ್ವತಃ ಅಂಬರೀಷ್ ಬದಲಾದ್ರು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambi to change for son abhi
Ambareesh, Abhishek Image

ರೆಬಲ್‍ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್‍ರ ಪ್ರಥಮ ಚಿತ್ರ ಯಾವುದು..? ಕಥೆ ಏನು..? ಎಂಬ ಬಗ್ಗೆ ಗಾಂಧಿನಗರದಲ್ಲಿ ಜೋರು ಜೋರು ಸುದ್ದಿಗಳು ಓಡಾಡುತ್ತಲೇ ಇವೆ. ಜಲೀಲ ಹಾಗೂ ಕನ್ವರ್‍ಲಾಲ್ ಹೆಸರಿನಲ್ಲಿ ಸಿನಿಮಾ  ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಅದು ಸ್ವತಃ ಅಂಬರೀಷ್‍ಗೆ ಇಷ್ಟವಿಲ್ಲವಂತೆ. ಹೀಗಾಗಿ ಮಗನ ಚಿತ್ರಕ್ಕಾಗಿ ಅಂಬರೀಷ್ ಕಥೆಗಳನ್ನು ಕೇಳುತ್ತಲೇ ಇದ್ದಾರೆ. ಅಂಬರೀಷ್ ಬದಲಾಗಿದ್ದಾರೆ.

ಬದಲಾಗಿರೋದು ಏಕೆ ಎಂದರೆ, ಅಂಬರೀಷ್ ತಮ್ಮ ಚಿತ್ರದ ಕಥೆಗಳನ್ನೇ ಪೂರ್ತಿ ಕೇಳಿದವರಲ್ಲ. ಇನ್ನು ನಂಬಿಕಸ್ತ ಡೈರೆಕ್ಟರ್‍ಗಳು ಬಂದರೆ, ಕಥೆಯ ಎಳೆಯನ್ನೂ ಕೇಳುತ್ತಿರಲಿಲ್ಲ. ಹೀಗೆ ತಮ್ಮ ಚಿತ್ರ ಜೀವನದುದ್ದಕ್ಕೂ ಕೇವಲ ನಿರ್ದೇಶಕರ ಮೇಲಿನ ನಂಬಿಕೆಯ ಮೇಲೆ ನಟಿಸಿದ್ದ ಅಂಬರೀಷ್, ಈಗ ಮಗನಿಗಾಗಿ ಬದಲಾಗಿದ್ದಾರೆ.

ಸುಮ್ನರ್ರಪ್ಪಾ.. ನನ್ನ ಸಿನಿಮಾಗಳಿಗೇ ಕಥೆ ಕೇಳಿರಲಿಲ್ಲ. ಈಗ ಮಗನಿಗಾಗಿ ಮೂರು ಕಥೆ ಕೇಳಿದ್ದೇನೆ ಎಂದ್ರೆ ಲೆಕ್ಕ ಹಾಕಿ ಎನ್ನುವ ಅಂಬರೀಷ್, ನಿರ್ಮಾಣದ ಹೊಣೆಯನ್ನೂ ಈಗಾಗಲೇ ಗೆಳೆಯ ಸಂದೇಶ್ ನಾಗರಾಜ್‍ಗೆ ವಹಿಸಿದ್ದಾರೆ. ಆದರೆ, ಕಥೆ ಫೈನಲ್ ಮಾಡೋದು ಅಂಬರೀಷ್ ಮಾತ್ರ.

Johnny Johnny Yes Papa Movie Gallery

Rightbanner02_statement_inside

Dalapathi Movie Gallery