` ಭೈರತಿ ರಣಗಲ್ಲು - ಹೊಸ ಸಿನ್ಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bhairathi ranagallu title registered
Shivarajkumar, KP Srikanth Image

ಮಫ್ತಿ. ಶಿವರಾಜ್ ಕುಮಾರ್-ಶ್ರೀಮುರಳಿ ಕಾಂಬಿನೇಷನ್‍ನ ಸಿನಿಮಾ ಮ್ಯಾಜಿಕ್ ಸೃಷ್ಟಿಸಿದೆ. ನರ್ತನ್ ಎಂಬ ಹೊಸ ನಿರ್ದೇಶಕನ ಮೇಲೆ ನಂಬಿಕೆಯಿಟ್ಟು ನಿರ್ಮಾಣ ಮಾಡಿದ್ದ ಜಯಣ್ಣ-ಭೋಗೇಂದ್ರ ಈಗ ಖುಷಿ ಖುಷಿಯಾಗಿದ್ದಾರೆ. ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದು ಶಿವರಾಜ್ ಕುಮಾರ್ ಅವರ ಭೈರತಿ ರಣಗಲ್ಲು ಎಂಬ ಡಾನ್ ಕ್ಯಾರೆಕ್ಟರ್.

ಆ ಪಾತ್ರದ ಗೆಟಪ್ಪು, ಸ್ಟೈಲು ಯಾವ ಮಟ್ಟಿಗೆ ಟ್ರೆಂಡ್ ಆಗಿದೆಯೆಂದರೆ, ಅದೇ ಹೆಸರಿನಲ್ಲಿ ಹೊಸ ಸಿನಿಮಾವೊಂದು ಬರೋಕೆ ರೆಡಿಯಾಗಿದೆ. ಭೈರತಿ ರಣಗಲ್ಲು ಎಂಬ ಹೆಸರನ್ನೇ ಈಗ ನೋಂದಣಿ ಮಾಡಿಸಲಾಗಿದೆ. ಮೂಲಗಳ ಪ್ರಕಾರ, ಈ ಟೈಟಲ್ ರಿಜಿಸ್ಟರ್ ಮಾಡಿಸಿರುವುದು ಕೆ.ಪಿ.ಶ್ರೀಕಾಂತ್. 

ಶ್ರೀಕಾಂತ್ ನಿರ್ಮಾಣದ ಟಗರು ಚಿತ್ರ ಈಗ ಫೈನಲ್ ಸ್ಟೇಜ್‍ನಲ್ಲಿದೆ. ಮುಂದಿನ ತಿಂಗಳು ರಿಲೀಸ್ ಆಗಬಹುದು. ಆ ಚಿತ್ರ ಮುಗಿದ ನಂತರ ಶಿವಣ್ಣ ಶ್ರೀಕಾಂತ್ ಅವರ ಜೊತೆಯಲ್ಲೇ ಭೈರತಿ ರಣಗಲ್ಲು ಸಿನಿಮಾ ಮಾಡ್ತಾರಾ..? ಗೊತ್ತಿಲ್ಲ. ಹಿಟ್ ಆದ ಪಾತ್ರದ ಹೆಸರು ಸಿನಿಮಾ ಅಗುವುದು ತುಂಬಾ ಅಪರೂಪ.

Related Articles :-

Bhairathi Ranagallu Title Registered

Johnny Johnny Yes Papa Movie Gallery

Rightbanner02_statement_inside

Dalapathi Movie Gallery