` ಜಗ್ಗೇಶ್ ಜೊತೆ ನಟಿಸಲಿರುವ ಆ ಸ್ಟಾರ್ ಯಾರು..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh ready to work with star director
Jaggesh Image

ನವರಸ ನಾಯಕ ಜಗ್ಗೇಶ್ ಅವರಿಗೆ ಮಲ್ಟಿಸ್ಟಾರ್ ಚಿತ್ರಗಳು ಹೊಸದಲ್ಲ. ಬಹುಶಃ ಶಿವರಾಜ್ ಕುಮಾರ್ ಬಿಟ್ಟರೆ, ನಾಯಕರಾಗಿ ಹಲವು ನಾಯಕರ ಜೊತೆ ತೆರೆ ಹಂಚಿಕೊಂಡಿರುವ ಹೀರೋ ಜಗ್ಗೇಶ್ ಅವರೇ ಇರಬೇಕು. ಶಿವರಾಜ್ ಕುಮಾರ್, ರವಿಚಂದ್ರನ್, ಅಂಬರೀಷ್, ರಕ್ಷಿತ್ ಶೆಟ್ಟಿ, ದರ್ಶನ್ ಸೇರಿದಂತೆ ಹಲವು ಸ್ಟಾರ್‍ಗಳ ಜೊತೆ ನಟಿಸಿರುವ ಜಗ್ಗೇಶ್, ಈಗ ಮತ್ತೊಂದು ಸ್ಟಾರ್ ಜೊತೆ ನಟಿಸೋಕೆ ರೆಡಿಯಾಗಿದ್ದಾರೆ.

2018ಕ್ಕೆ ಕನ್ನಡದ ಇನ್ನೊಬ್ಬ ಅದ್ಬುತ ನಟ ಮತ್ತು ನನ್ನ ಆತ್ಮೀಯನ ಜೊತೆ ಭರ್ಜರಿ ಕಾಂಬೊ. ದಕ್ಷಿಣ ಭಾರತದಲ್ಲಿ ಖ್ಯಾತನಾಮ ನಿರ್ದೇಶಕ, ಲಕ್ಕಿ ನಿರ್ಮಾಪಕರ ಜೊತೆ ಕೆಲಸ ಮಾಡಲು ನಿನ್ನೆ ಮಾತು ಕೊಟ್ಟೆ. ನನ್ನ ಮನಸ್ಸಿಗೆ ಇಷ್ಟವಾಗಿ ಜನರಿಗೂ ಮೆಚ್ಚುಗೆಯಾದರೆ ಕೊನೆ ಉಸಿರುವವರೆಗೆ ನಟಿಸುವೆ ಎಂದು ಹೇಳಿಕೊಂಡಿದ್ದಾರೆ ಜಗ್ಗೇಶ್.

ಜಗ್ಗೇಶ್ ಅವರಿಗೇ ಈ ಪರಿಯ ಎಕ್ಸೈಟ್‍ಮೆಂಟು ಎಂದರೆ, ಅಭಿಮಾನಿಗಳಿಗೆ ಎಷ್ಟಿರಬೇಡ. ಯಾರು ಸರ್ ಆ ಹೀರೋ..? ಡೈರೆಕ್ಟರ್ ಯಾರು..? ಪ್ರೊಡ್ಯೂಸರ್ ಯಾರು..? ಹೇಳ್ಬಿಡಿ ಸರ್..

 

Johnny Johnny Yes Papa Movie Gallery

Rightbanner02_statement_inside

Dalapathi Movie Gallery