ಅಪ್ಪು ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮ ಕವಲು ದಾರಿ. ಗೋಬಸಾಮೈ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಚಿತ್ರದಲ್ಲಿ ಅನಂತ್ ನಾಗ್, ಅಚ್ಯುತ, ರಿಷಿ ಮೊದಲಾದವರಿದ್ದಾರೆ. ಆದರೆ, ಈಗಿನ ವಿಶೇಷವೆಂದರೆ, ಚಿತ್ರದಲ್ಲಿ ಕಪ್ಪು ಬಿಳುಪು ಕಥೆಯೂ ಇದೆ. ಅದು ಕ್ರೈಂ & ಥ್ರಿಲ್ಲರ್.
ಮಿಸ್ಟರ್ & ಮಿಸೆಸ್ ನಾಯ್ಡು ಅನ್ನೋ ಸರ್ಕಾರಿ ಅಧಿಕಾರಿಗಳು 70ರ ದಶಕದಲ್ಲಿ ಒಂದು ಕ್ರೈಂ ಮಾಡಿರುತ್ತಾರೆ. ಆ ಅಪರಾಧಕ್ಕೂ ಈಗ ನಡೆಯುತ್ತಿರುವ ವಿದ್ಯಮಾನಗಳಿಗೂ ಸಂಬಂಧ ಇದೆ. ಅದನ್ನು ರೋಚಕವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಹೇಮಂತ್ ರಾವ್.
ಮಿಸ್ಟರ್ ನಾಯ್ಡು ಆಗಿ ಸಿದ್ದಾರ್ಥ ಮಾಧ್ಯಮಿಕ ಕಾಣಿಸಿಕೊಂಡರೆ, ಮಿಸೆಸ್ ನಾಯ್ಡು ಆಗಿ ಸಮನ್ವಿತಾ ಶೆಟ್ಟಿ. ಆಗಿನ ಕಾಲದ ವೇಷಭೂಷಣದ ಕಾಸ್ಟ್ಯೂಮ್ ಡಿಸೈನ್ ಇಂಚರ & ವಿನಯಾ ಅವರದ್ದು. ಒಟ್ಟಿನಲ್ಲಿ ಪುನೀತ್ ನಿರ್ಮಣದ ಸಿನಿಮಾ ಬಿಡುಗಡೆಗೂ ಮುನ್ನವೇ ಕುತೂಹಲ ಹುಟ್ಟಿಸುತ್ತಿದೆ.