` ಮಹದಾಯಿ ಸಮಸ್ಯೆಗೆ ಉಪ್ಪಿ ಹೇಳಿದ ಸಾಯಿಬಾಬಾ ಪರಿಹಾರವೇನು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra suggests solution to mahadayi
Mahadayi River, Upendra Image

ಪ್ರಜಾಕೀಯದ ಮೂಲಕ ಹೊಸ ರಾಜಕೀಯ ಸೃಷ್ಟಿಸುತ್ತಿರುವ ಉಪೇಂದ್ರ, ಈಗ ರಾಜ್ಯದ್ಯಂತ ಕಿಚ್ಚು ಹಚ್ಚಿಸಿರುವ ಮಹದಾಯಿಗೆ ತಮ್ಮದೇ ಆದ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಆ ಪರಿಹಾರದಲ್ಲಿ ಅವರು ಹೇಳಿರುವುದು ಎರಡು ಕಥೆಗಳನ್ನು. ಆ ಎರಡೂ ಕಥೆಗಳ ಹೀರೋ ಸಾಯಿಬಾಬಾ ಎನ್ನುವುದು ವಿಶೇಷ.

ಕಥೆ 01 - ಆಂಧ್ರಪ್ರದೇಶದ ರಾಯಲಸೀಮೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. 1995ರಲ್ಲಿ ಪುಟ್ಟಪರ್ತಿಯ ಸತ್ಯಸಾಯಿಬಾಬಾ ಸತತ ಒಂದೂವರೆ ವರ್ಷ ಕೆಲಸ ಮಾಡಿದರು. 18 ತಿಂಗಳಲ್ಲಿ 2000 ಕಿ.ಮೀ. ಪೈಪ್‍ಲೈನ್ ಹಾಕಿಸಿ, 43 ನೀರಿನ ತೊಟ್ಟಿ ನಿರ್ಮಿಸಿದರು. ಒಂದೊಂದು ನೀರಿನ ತೊಟ್ಟಿಗೂ ಒಂದೂವರೆ ಲಕ್ಷ ಲೀ.ನಿಂದ ಎರಡೂವರೆ ಲಕ್ಷ ಲೀ. ಸಾಮಥ್ರ್ಯವಿತ್ತು. ಇದರಿಂದ ರಾಯಲಸೀಮೆಯ ಕುಡಿಯುವ ನೀರಿನ ಸಮಸ್ಯೆಯ ಪರಿಹಾರ ಶೇ.70ರಷ್ಟು ನಿವಾರಣೆಯಾಯ್ತು.

ಕಥೆ 02 - ಚೆನ್ನೈನಲ್ಲಿಯೂ ಕೂಡಾ ಇದೇ ರೀತಿ ನೀರಿನ ಸಮಸ್ಯೆ ಎದುರಾದಾಗ ಕೃಷ್ನಾ ನದಿಯ ನೀರನ್ನು ಚೆನ್ನೈಗೆ ಹರಿಸಿ ಸಮಸ್ಯೆ ನೀಗಿಸಿದರು. ಆ ಕೆಲಸದಲ್ಲಿಯೂ ಸಾಯಿಬಾಬಾ ಅವರ ಪಾತ್ರ ದೊಡ್ಡದಾಗಿತ್ತು.

ಈ ಎರಡು ಕಥೆಗಳಲ್ಲಿ ಪರಿಹಾರವಿದೆ. ಮಹದಾಯಿ ಹೋರಾಟದ ಜೊತೆಯಲ್ಲೇ, ಅದರ ಹೊರತಾದ ಪರ್ಯಾಯ ಮಾರ್ಗವೊಂದನ್ನು ಹುಡುಕಿಕೊಳ್ಳಬೇಕಾದ ಅಗತ್ಯವಿದೆ. ಉಪ್ಪಿ ಹೇಳುತ್ತಿರುವ ಪರಿಹಾರ ಇದೇ.

Related Articles :-

ಮಹದಾಯಿ - ಶಿವರಾಜ್ ಕುಮಾರ್ ಹೇಳಿದ ಜವಾಬ್ದಾರಿಯ ಪಾಠ

KFCC Supports Mahadayi; To Hold A Meeting Today

Johnny Johnny Yes Papa Movie Gallery

Rightbanner02_statement_inside

Dalapathi Movie Gallery