ಚಮಕ್ ಸಿನಿಮಾದ ಫಸ್ಟ್ ನೈಟ್ ಲೈಟ್ ಆಫ್ ಟೀಸರ್ ಅದೆಂತ ಸೆನ್ಸೇಷನ್ ಸೃಷ್ಟಿಸಿಬಿಟ್ಟಿದೆಯಂದರೆ, ಸಿನಿಮಾದಲ್ಲಿ ಲೈಟ್ ಆಫ್ ಆಗುತ್ತಾ ಇಲ್ವಾ ಅನ್ನೋ ಕುತೂಹಲಕ್ಕೇ ಥಿಯೇಟರ್‍ನತ್ತ ಹೋಗೋಕೆ ಪ್ರೇಕ್ಷಕರು ಸಿದ್ಧರಾಗಿರುವ ಹಾಗಿದೆ. ಇಷ್ಟಕ್ಕೂ ಆ ದೃಶ್ಯದ ಹಿನ್ನೆಲೆ ಏನು..? ಸಿನಿಮಾ ಕಥೆ ಏನು..? ಅಂಥಾ ಹುಡುಕಿದಾರ ಹೊರಬಿದ್ದಿರುವುದೇ ಈ ಮ್ಯಾಟರ್ರು. ವಿದೇಶಿ ಹುಡುಗ ಚಮಕ್ಸ್ ದೇಸೀ ಹುಡುಗಿ.
ಸಿನಿಮಾದಲ್ಲಿ ಗಣೇಶ್ ಗೈನಕಾಲಜಿಸ್ಟ್ ಮತ್ತು ಫಾರಿನ್ ಹುಡುಗ. ಮದುವೆಯೊಂದರಲ್ಲಿ ಗಣೇಶ್ ದೇಸೀ ಹುಡುಗಿ ರಶ್ಮಿಕಾರನ್ನು ನೋಡಿ ಲವ್ವಲ್ಲಿ ಬಿದ್ದು ಮದುವೆಯೂ ಆಗಿಬಿಡ್ತಾರೆ. ನಾಯಕನ ನಿರೀಕ್ಷೆಯೇ ಬೇರೆ. ನಾಯಕಿ ಇರುವ ರೀತಿಯೇ ಬೇರೆ. ಆಗ ಸೃಷ್ಟಿಯಾಗುವ ರೊಮ್ಯಾಂಟಿಕ್ ಕಾಮಿಡಿಯ ಸರಿಗಮವೇ ಚಮಕ್.
ಚಿತ್ರದಲ್ಲಿ ಗಣೇಶ್-ರಶ್ಮಿಕಾ ಅವರಷ್ಟೇ ಪ್ರಮುಖ ಪಾತ್ರದಲ್ಲಿ ಕಾಣಿಸಿರೋದು ಸಾಧು ಕೋಕಿಲ. ಅವತಾರ ಪುರುಷ ಸಾಧುಕೋಕಿಲ, ಇಲ್ಲಿ ಅವಾಂತರ ಪುರುಷರಾಗಿ ನಟಿಸಿದ್ದಾರೆ. ಇನ್ನು ಚಿತ್ರದ ಬಗ್ಗೆ ಸುನಿ ರಿಲ್ಯಾಕ್ಸ್ ಆಗಿರೋಕೆ ಇನ್ನೂ ಒಂದು ಕಾರಣವಿದೆ. ಅವರ ಹಿಂದಿನ ಚಿತ್ರಗಳಿಗೆ ಇದ್ದಷ್ಟು ಪೈಪೋಟಿ ಈ ಚಿತ್ರಕ್ಕಿಲ್ಲ. ಸುನಿ ಅವರ ಹಿಂದಿನ ಸಿನಿಮಾಗಳೆಲ್ಲ ಒಂದಲ್ಲ ಒಂದು ದೊಡ್ಡ ಸ್ಟಾರ್ ಚಿತ್ರದೊಂದಿಗೆ ಪೈಪೋಟಿ ಮಾಡಿಕೊಂಡೇ ಬಂದಿದ್ದಂಥವು. ಈ ಬಾರಿ ಅಂತಹ ದೊಡ್ಡ ಸ್ಟಾರ್ ಚಿತ್ರಗಳ ಪೈಪೋಟಿ ಚಮಕ್‍ಗೆ ಇಲ್ಲ. ಮೋಸ್ಟ್ ಲೀ, ಈ ಬಾರಿ ಸುನಿ ಸ್ಟಾರ್‍ನ್ನೇ ಇಟ್ಟುಕೊಂಡು ಚಮಕ್ ಕೊಟ್ಟಿರೋದು ಕಾರಣ ಇರಬಹುದು.