` ಶಿವರಾಜ್ ಕುಮಾರ್ ದಾಖಲೆ 2018ಕ್ಕೆ ಮನೋರಂಜನ್‍ಗೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
first movie of 2018 is brihaspathi
Manoranjan In Brihaspathi

ಕಳೆದ 2 ವರ್ಷಗಳಿಂದ ಈ ದಾಖಲೆ ಶಿವರಾಜ್ ಕುಮಾರ್ ಬಳಿಯೇ ಇತ್ತು. ಈ ವರ್ಷ.. ಅಲ್ಲಲ್ಲ ಮುಂದಿನ ವರ್ಷ ಈ ದಾಖಲೆ ಮನೋರಂಜನ್ ರವಿಚಂದ್ರನ್ ಪಾಲಾಗುತ್ತಿದೆ. ಯಾವ ದಾಖಲೆ ಅಂತೀರಾ..?

2018ಕ್ಕೆ ಬಿಡುಗಡೆಯಾಗಲಿರುವ ಮೊದಲ ಸಿನಿಮಾ ಬೃಹಸ್ಪತಿ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ನಂದಕಿಶೋರ್ ನಿರ್ದೇಶನದ ಈ ಚಿತ್ರ 2018ರಲ್ಲಿ ಬಿಡುಗಡೆಯಾಗಲಿರುವ ಮೊತ್ತ ಮೊದಲ ಕನ್ನಡ ಸಿನಿಮಾ.

2017ರಲ್ಲಿ ಶ್ರೀಕಂಠ ಹಾಗೂ 2016ರಲ್ಲಿ ಕಿಲ್ಲಿಂಗ್ ವೀರಪ್ಪನ್ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದ ಮೊದಲ ಸಿನಿಮಾ ಎನಿಸಿದ್ದವು. ಈ ವರ್ಷ ಜ್ಯೂನಿಯರ್ ಕ್ರೇಜಿಸ್ಟಾರ್ ಚಿತ್ರದೊಂದಿಗೆ ಹೊಸ ವರ್ಷ ಶುರುವಾಗಲಿದೆ.

ನಂದಕಿಶೋರ್ ನಿರ್ದೇಶನದ ಈ ಚಿತ್ರ, ಯುವಕರಿಗೆ ಸ್ಫೂರ್ತಿ ತುಂಬುವಂತಹಾ ಕಥೆ ಹೊಂದಿದೆ. ಜ್ಯೂನಿಯರ್ ಕ್ರೇಜಿಸ್ಟಾರ್‍ಗೆ ಶುಭವಾಗಲಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery