` ಛೆ.. ತಪ್ಪು ಮಾಡಿಬಿಟ್ಟೆ.. ಸುದೀಪ್ ಸರ್ ಕ್ಷಮಿಸಿಬಿಡಿ - ಸಂಯುಕ್ತಾ ಹೆಗಡೆ - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
samyuktha apologizes to sudeep
Samyuktha Hegde, Sudeep Image

ಸಂಯುಕ್ತಾ ಹೆಗಡೆ ಮೊದಲು ಸುದ್ದಿಯಾಗಿದ್ದು ಕಿರಿಕ್ ಪಾರ್ಟಿಯಿಂದ. ನೀನಿರೆ ಸನಿಹ ನೀನಿರೆ ಹಾಡಿನ ಮೋಡಿಗೆ ಮರುಳಾಗದವರೇ ಇಲ್ಲ. ಪ್ರತಿಭಾವಂತ ಹುಡುಗಿ ಎಂದು ಎಲ್ಲರೂ ಬೆರಗಿನಿಂದ ನೋಡುತ್ತಿರುವಾಗಲೇ ಸಂಯುಕ್ತಾ ಹೆಗಡೆ ಸುದ್ದಿಯಾಗಬಾರದ ಕಾರಣಗಳಿಗೇ ಸುದ್ದಿಯಾಗುತ್ತಾ ಹೋದರು. ಕಾಲೇಜ್ ಕುಮಾರ ಚಿತ್ರದಲ್ಲಿ ಕಿರಿಕ್ ಮಾಡಿಕೊಂಡರು. ಚಿತ್ರ ಬಿಡುಗಡೆಯಾದರೂ ಕಿರಿಕ್ ನಿಲ್ಲಲೇ ಇಲ್ಲ. ಅದು ಸಂಯುಕ್ತಾಗೆ ಕೇವಲ 2ನೇ ಸಿನಿಮಾ. ಅದಾದ ನಂತರ ಸಂಯುಕ್ತಾ ಹೆಗಡೆ ಕಾಣಿಸಿಕೊಂಡಿದ್ದು ಬಿಗ್‍ಬಾಸ್‍ನಲ್ಲಿ. ಅಲ್ಲಿ ಸಮೀರಾಚಾರ್ಯ ಅವರ ಮೇಲೆ ಸಂಯುಕ್ತಾ ನಡೆಸಿದ ಕಪಾಳಮೋಕ್ಷ ಪ್ರಕರಣ ಯಾವ ರೀತಿ ಸುದ್ದಿಯಾಯಿತು ಅನ್ನೋದು ಗೊತ್ತಿರುವಂಥದ್ದೇ. ಈಗ ಈ ಎಲ್ಲ ಘಟನೆಯ ಬಗ್ಗೆ ಸಂಯುಕ್ತಾ ಹೆಗಡೆ ಮನಬಿಚ್ಚಿ ಮಾತನಾಡಿದ್ದಾರೆ. ಅವರ ಮಾತಿನಲ್ಲೇ ಕೇಳಿ.

`ಹೊಡೆಯುವುದೇನೋ ಹೊಡೆದುಬಿಟ್ಟೆ. ಆದರೆ, ಕ್ಷಮೆ ಕೇಳಿದ ನಂತರವೂ ಅದು ಕಾಡುತ್ತಲೇ ಇದೆ. ನಾನು ಹೊಡೆಯಬಾರದಿತ್ತು, ತಪ್ಪು ಮಾಡಿಬಿಟ್ಟೆ ಎನ್ನಿಸುತ್ತಲೇ ಇದೆ. ಹೌದು, ನಾನು ದುಡುಕಿಬಿಟ್ಟೆ. ಆ ತಪ್ಪು ಮಾಡಬಾರದಿತ್ತು. ಆ ಘಟನೆಗೆ ನೀವು ಟಿವಿಯಲ್ಲಿ ನೋಡಿದ ಅದೊಂದು ದೃಶ್ಯವೇ ಕಾರಣ ಅಲ್ಲ. ಹಿಂದಿನ ಘಟನೆಗಳ ಒಟ್ಟು ರೂಪ ಅದು. ಆದರೂ ನಾನು ಹೊಡೆಯಬಾರದಿತ್ತು. ನನ್ನ ಆ ವರ್ತನೆ ನನಗೇ ಬೇಸರ ಮೂಡಿಸಿದೆ. ಬಿಗ್‍ಬಾಸ್‍ನಿಂದ ಬಂದ ಮೇಲೆ ಹಲವರ ಟೀಕೆಗಳನ್ನು ನೋಡಿದೆ. ಅಭಿಮಾನಿಗಳೂ ಬೈದಿದ್ದಾರೆ. ಅಲ್ಲದವರೂ ಬೈದಿದ್ದಾರೆ. ಆದರೆ, ಅಚ್ಚರಿ ಎನಿಸಿದ್ದು, ಅದೇ ಬಿಗ್‍ಬಾಸ್ ಶೋನಲ್ಲಿ ನನಗಿಂತಲೂ ಕೆಟ್ಟದಾಗಿ ವರ್ತಿಸಿದವರು, ನನ್ನ ಬಗ್ಗೆ ಮಾತನಾಡಿದಾಗ. ಇರಲಿ. ಈ ಘಟನೆ ನಂತರ ಸುದೀಪ್ ಸರ್ ಜೊತೆ ಕೂಡಾ ನಾನು ಮಾತನಾಡಿಲ್ಲ. ಅವರಿಗೂ ನಾನು ಕ್ಷಮೆ ಕೇಳಬೇಕಿದೆ. ಏಕೆಂದರೆ, ನನ್ನ ಈ ಪ್ರಕರಣದಿಂದ ಅವರ ಗೌರವಕ್ಕೂ ಪೆಟ್ಟು ಬಿದ್ದಿದೆ.''

ಇದಿಷ್ಟೂ ಸಂಯುಕ್ತಾ ಹೆಗಡೆ ಮಾತು. ವಯಸ್ಸಿನ್ನೂ ಕೇವಲ 19. ಕ್ಷಮಿಸಬಹುದಲ್ಲವೆ. 

ಇನ್ನು ಬಿಗ್‍ಬಾಸ್ ಶೋನಲ್ಲಿಯೇ ಮಾತನಾಡಿರುವ ಸುದೀಪ್, ಸಂಯುಕ್ತಾ ಮಾಡಿದ್ದು ತಪ್ಪು. ಅವರು ಏನೇ ಸಮರ್ಥನೆ ಮಾಡಿದ್ದರೂ, ಅದನ್ನು ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಸಂಯುಕ್ತಾ ಅವರೇ, ನೀವು ಮಾಡಿದ್ದು ತಪ್ಪು ಎಂದಿದ್ದಾರೆ.

Padarasa Movie Gallery

Kumari 21 Movie Gallery