ಅರುಣ್ ಸಾಗರ್, ನಟ, ನಿರ್ದೇಶಕ, ಕಲಾ ನಿರ್ದೇಶಕ. ಚಿತ್ರರಂಗದಲ್ಲಿ ಒಂದರ್ಥದಲ್ಲಿ ಅರುಣ್ ಸಾಗರ್ ಸಕಲಕಲಾವಲ್ಲಭ. ಅವರ ಮಗಳೀಗ ಗಾಯಕಿಯಾಗುತ್ತಿದ್ದಾರೆ. ಶರಣ್ ಅಭಿನಯದ ರ್ಯಾಂಬೋ ಚಿತ್ರದಲ್ಲಿ ಶರಣ್ ಪುತ್ರಿ ಆದಿತಿ, ಹಾಡು ಹಾಡಿದ್ದಾರೆ. ಅವರಿಗಿನ್ನೂ 15 ವರ್ಷ ಎನ್ನುವುದು ವಿಶೇಷ. ಧಮ್ ಮಾರೋ ಧಮ್.. ಎಂಬ ಹಾಡನ್ನು ಆದಿತಿ ಅವರಿಂದ ಹಾಡಿಸಿರುವುದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ.
ಶರಣ್ ಅಭಿನಯದ ಈ ಚಿತ್ರಕ್ಕೆ ದಿಲ್‍ವಾಲ ಅನಿಲ್ ನಿರ್ದೇಶನವಿದೆ. ಚಿತ್ರದ ನಿರ್ಮಾಪಕರು ಯಾರು ಎಂದರೆ, ಪಟ್ಟಿ ದೊಡ್ಡದಾಗಿದೆ. ಅಟ್ಲಾಂಟಾ ನಾಗೇಂದ್ರ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಛಾಯಾಗ್ರಹಕ ಸುಧಾಕರ್ ರಾಜ್, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಕ್ರಿಯೇಟಿವ್ ಹೆಡ್ ತರುಣ್ ಸುಧೀರ್.. ಹೀಗೆ ಎಲ್ಲ ತಂತ್ರಜ್ಞರೂ ನಿರ್ಮಾಪಕರೇ. ಬಂದ ಲಾಭದಲ್ಲಿ ಎಲ್ಲರಿಗೂ ಶೇರ್ ಸಿಗಲಿದೆ.