ಅಂಜನೀಪುತ್ರ ಚಿತ್ರದ ಆಡಿಯೋ ರಿಲೀಸ್ ಆದಾಗ ಈ ಹಾಡು ಏನೋ ಸ್ಪೆಷಲ್ಲಾಗಿದೆಯಲ್ಲ ಎನ್ನಿಸಿತ್ತು. ಈಗ ಚಿತ್ರ ಬಿಡುಗಡೆಯಾಗಿದ್ದೇ ತಡ, ಹಾಡು ವೈರಲ್ ಆಗಿದೆ. ಎಷ್ಟೇ ಅಂದ್ರೂ ಇದು ಹೆಂಡ್ತಿಯನ್ನು ಹೊಗಳುವ ಹಾಡು. ಮುದ್ದಿಸುವ ಹಾಡು. ಮುದ್ದು ಮಾಡುತ್ತಲೇ ಹೆಂಡ್ತಿಯನ್ನು ಖೆಡ್ಡಾಗಿ ಬೀಳಿಸಿಕೊಳ್ಳುವ ತರಲೆ ಗಂಡಂದಿರ ಪಾಡು ಹೇಳುವ ಹಾಡು.
ಕುಂದಾಪುರ ಕನ್ನಡದಲ್ಲಿರುವ ಈ ಹಾಡು ಶುರುವಾಗುವುದೇ ಹೀಗೆ..ಭಾರಿ ಖುಷಿ ಮಾರೆ ನಂಗೆ, ನನ್ನ ಹೆಂಡ್ತಿ ಕಂಡ್ರೆ.. ಒಂದು ಚೂರು ಬಯ್ಯೋದಿಲ್ಲ ರಾತ್ರಿ ಕುಡ್ಕಂಡ್ ಬಂದ್ರೆ ಅಂಥಾ ಶುರುವಾಗುವ ಈ ಹಾಡು ಗಂಡು ಮಕ್ಕಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.
ಚಿತ್ರದ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಅದ್ಭುತ ಕ್ಯಾಮೆರಾ, ಡ್ಯಾನ್ಸು, ಹಳ್ಳಿಯ ಗೆಟಪ್ಪು.. ಎಲ್ಲವೋ ಸೂಪರ್. ಆದರೆ, ಹಾಡಿನ ಸಾಹಿತ್ಯ ಇಟ್ಟುಕೊಂಡಿರೋ ಅಭಿಮಾನಿಗಳು ರಕ್ಷಿತ್ ಶೆಟ್ಟಿ ಕಾಲೆಳಿತಿರೋದು ವಿಶೇಷ. ಅಫ್‍ಕೋರ್ಸ್.. ಸೀರಿಯಸ್ಸಾಗೇನೂ ತಗೋಬೇಕಿಲ್ಲ. ಅಭಿಮಾನಿಗಳು ಮಾಡ್ತಿರೋದು ತಮಾಷೆಗಾಗಿನೇ.. ರಶ್ಮಿಕಾ-ರಕ್ಷಿತ್ ಪ್ರೀತಿ ಪ್ರೇಮ ಗುಟ್ಟೇನೂ ಅಲ್ವಲ್ಲ.