ರೈಸನ್. ಇದು ಸುದೀಪ್ ನಟಿಸುತ್ತಿರುವ ಹಾಲಿವುಡ್ ಚಿತ್ರದ ಹೆಸರು. ಚಿತ್ರದ ಫೋಟೋಶೂಟ್ ಕಳೆದ ತಿಂಗಳು ಬೆಂಗಳೂರಿನಲ್ಲೇ ನಡೆದಿತ್ತು. ಈಗ ಚಿತ್ರದಲ್ಲಿನ ಸುದೀಪ್ ಕುರಿತ ಲುಕ್ ಹೊರಬಿದ್ದಿದೆ. ಚಿತ್ರದಲ್ಲಿ ಸುದೀಪ್ ಕಮ್ಯಾಂಡೋ ಗೆಟಪ್‍ನಲ್ಲಿ ಮಿನುಗುತ್ತಿದ್ದಾರೆ.
ಚಿತ್ರದ 2ನೇ ಲುಕ್ ರಿಲೀಸ್ ಮಾಡಿರುವ ರೈಸನ್ ಚಿತ್ರತಂಡ, ಚಿತ್ರದ ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ದಿ ವಿಲನ್ ಚಿತ್ರದ ಶೂಟಿಂಗ್ ಮುಗಿಸಿಕೊಂಡ ನಂತರ ಸುದೀಪ್, ರೈಸನ್ ಶೂಟಿಂಗ್‍ನಲ್ಲಿ ಬ್ಯುಸಿಯಾಗುವ ಎಲ್ಲ ನಿರೀಕ್ಷೆಗಳೂ ಇವೆ. ನಾಗೇಂದ್ರ ಜಯರಾಮ್ ನಿರ್ಮಾಣದ ಚಿತ್ರಕ್ಕೆ, ಎಡ್ಡಿ ಆರ್ಯ ನಿರ್ದೇಶನವಿದೆ.