8ಎಂಎಂ. ಜಗ್ಗೇಶ್ ಅಭಿನಯದ ಈ ಚಿತ್ರದ ಮೇಲೆ ಜಗ್ಗೇಶ್ಗಷ್ಟೇ ಅಲ್ಲ, ಅಭಿಮಾನಿಗಳಿಗೂ ಕೋಟಿ ಕೋಟಿ ನಿರೀಕ್ಷೆಗಳಿವೆ. ಏಕೆಂದರೆ, ಜಗ್ಗೇಶ್ ನಾಯಕರಾದ ಮೇಲೆ ಇದೇ ಮೊದಲ ಬಾರಿಗೆ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಡ್ಡಧಾರಿಯಾಗಿ, ಕೈಲಿ ರಿವಾಲ್ವರ್ ಹಿಡಿದಿರುವ ಜಗ್ಗೇಶ್ರ ಕಣ್ಣ ನೋಟ, ಅವರಿಗೆ ಅಭಿಮಾನಿಗಳೇಕೆ ನವರಸ ನಾಯಕ ಎಂದು ಬಿರುದು ಕೊಟ್ಟರು ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ.
ಜಗ್ಗೇಶ್ಗೆ ಇಂಥಾದ್ದೊಂದು ಮಾಸ್ ಲುಕ್ ನೀಡಿರುವುದು ಮಾದೇಗೌಡ ಎಂಬ ಮೇಕಪ್ ಮ್ಯಾನ್. ಹಣ ಒಬ್ಬ ಮನುಷ್ಯನನ್ನು ಹೇಗೆಲ್ಲ ಬದಲಾಯಿಸುತ್ತೆ ಎಂಬುದೇ ಚಿತ್ರದ ಕಥೆ. ಸಿನಿಮಾದಲ್ಲಿ ಜಗ್ಗೇಶ್ ಅವರದ್ದು ಸೀರಿಯಲ್ ಕಿಲ್ಲರ್ ಪಾತ್ರವಂತೆ.
ಅಂಜನೀಪುತ್ರ ಚಿತ್ರದೊಂದಿಗೆ ಚಿತ್ರದ ಟ್ರೇಲರ್ ಥಿಯೇಟರುಗಳಲ್ಲೇ ರಿಲೀಸ್ ಆಗಿದೆ. ಜಗ್ಗೇಶ್ ಎಂದರೆ ನಗು ಎನ್ನುತ್ತಿದ್ದವರೆಲ್ಲ ಅರೆಕ್ಷಣ ಶಾಕ್ಗೊಳಗಾಗಿದ್ದಾರೆ. ಕ್ರೆಡಿಟ್ ಸಲ್ಲಬೇಕಿರುವುದು ಚಿತ್ರದ ನಿರ್ದೇಶಕ ಹರಿಕೃಷ್ಣ ಅವರಿಗೆ. ಚಿತ್ರಕ್ಕೆ ನಾರಾಯಣ ಸ್ವಾಮಿ, ಪ್ರದೀಪ್, ಸಲೀಂ ಶಾ ಎಂಬುವವರು ನಿರ್ಮಾಪಕರು.