ಸತತವಾಗಿ ಮೂರು ಹಿಟ್ ಕೊಟ್ಟು ಹ್ಯಾಟ್ರಿಕ್ ಸಾಧಿಸಿರುವ ಧ್ರುವ ಸರ್ಜಾ, ಪೊಗರು ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ತಮ್ಮ ಚಿತ್ರಕ್ಕಾಗಿ ಕಮಿಟ್ ಆಗುವುದರಲ್ಲಿ ಧ್ರುವಾಗೆ ಧ್ರುವಾನೇ ಸಾಟಿ. ಅದು ಈ ಬಾರಿಯೂ ಸಾಬೀತಾಗುತ್ತಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ, 12 ವರ್ಷದ ಹುಡುಗನಾಗಿ ಕಾಣಿಸಿಕೊಳ್ಳಬೇಕಿದೆ. ಅದೊಂದು ದೃಶ್ಯಕ್ಕಾಗಿ ಧ್ರುವ 30 ಕೆಜಿ ತೂಕ ಇಳಿಸಿಕೊಳ್ಳುತ್ತಿದ್ದಾರೆ.
ಇಷ್ಟಕ್ಕೂ ಅದೇನು ಚಿತ್ರದುದ್ದಕ್ಕೂ ಇರುವ ಪಾತ್ರವೇನಲ್ಲ. ಇಡೀ ಸಿನಿಮಾದಲ್ಲಿ ಅದು ಬರೋದು ಕೇವಲ 4 ನಿಮಿಷ ಮಾತ್ರವಂತೆ. ಆದರೂ 4 ನಿಮಿಷದ ಸೀನ್‍ಗಳಿಗಾಗಿ 30 ಕೆಜಿ ತೂಕ ಇಳಿಸಿಕೊಂಡಿರುವ ಧ್ರುವಾ, ನಂದಕಿಶೋರ್ ಆ್ಯಕ್ಷನ್ ಕಟ್‍ಗೆ ಕಾಯುತ್ತಿದ್ದಾರೆ.